Monday, March 2, 2026

spot_img

ಮತ್ತೊಂದು ದೋಣಿ ಪಲ್ಟಿ: ಏಳು ಜನರ ರಕ್ಷಣೆ

ಉಡುಪಿ:ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಸಮುದ್ರದ ತೆರೆಯ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಏಳು ಜನ ಮೀನುಗಾರರು ನೀರುಪಾಲಾದ ಘಟನೆ ಕಾಪುನಲ್ಲಿ ನಡೆದಿದೆ. ಕಾಪು ಲೈಟ್‌ಹೌಸ್‌ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಹತ್ತಿರದಲ್ಲೆ ಇದ್ದ ಸ್ಥಳೀಯ ಮೀನುಗಾರರು ಏಳು ಜನ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ಸೋಮವಾರ ಮುಂಜಾನೆ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ, ಭಾರಿ ಗಾತ್ರದ ತೆರೆಗೆ ಸಿಲುಕಿ ದೋಣಿ ಮಗುಚಿ ಅವಘಡ ಸಂಭವಿಸಿದೆ. ದೋಣಿಯಲ್ಲಿದ್ದ ಮೀನುಗಾರರನ್ನು ಸ್ಥಳೀಯ ಮೀನುಗಾರರಾದ ಪ್ರಶಾಂತ್ ಮತ್ತು ವಿನೋದ್ ರಕ್ಷಣೆ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles