Thursday, October 23, 2025

spot_img

ಸಂಸದ ಕೋಟ ಸಮಕ್ಷಮದಲ್ಲಿ ಇಂದ್ರಾಳಿ ಸೇತುವೆಗೆ ಕಾಂಕ್ರೆಟೀಕರಣಕ್ಕೆ ಚಾಲನೆ.

ಉಡುಪಿ: ಮಳೆ ಕಾರಣಕೋಸ್ಕರ ಬಹುದಿನಗಳಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಕಾಂಕ್ರೆಟೀಕರಣ ವಿಳಂಬವಾಗುತ್ತಿದ್ದು. ಇದೀಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಸಮಕ್ಷಮ ಇಂದ್ರಾಳಿ ಮೇಲ್ಸೇತುವೆ ಕಾಂಕ್ರೆಟೀಕರಣ ಮಾಡುವ ಕೆಲಸ ಆರಂಭವಾಗಿದೆ.

ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಕೋಟ ಮಧ್ಯದಲ್ಲಿ ಮಳೆ ವಿಪರೀತವಾಗಿ ಬಾರದಿದ್ದಲ್ಲಿ ಇನ್ನೂ10 ರಿಂದ 12 ದಿನಗಳಲ್ಲಿ ಕಾಂಕ್ರೀಟಿಕರಣ ಮುಗಿಯುತ್ತದೆ. ನಂತರ ಕನಿಷ್ಠ 25 ದಿವಸಗಳ ಅವಧಿಯಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಮುಗಿಯಲು ಬೇಕಾಗುತ್ತದೆ ಆದ್ದರಿಂದ ಕಾಮಗಾರಿ ಮುಗಿಯುತ್ತಲೆ ರಸ್ತೆ ಸರಾಗಬಹುದು ಎಂದು ನಿರೀಕ್ಷೆಯಲ್ಲಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಸಂಸದರೊಂದಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles