ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಸೊಂಟಕ್ಕೆ ಧರಿಸುವ ಬೆಲ್ಟ್ ಬಳಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯಲ್ಲಿ ನಡೆದಿದೆ. ಕೆಳಾರ್ಕಳಬೆಟ್ಟು ಗ್ರಾಮದ ಜಯಂತಿ ಎಸ್ ಅವರ ಪುತ್ರ ಸ್ವಸ್ತಿಕ್(16) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಉಡುಪಿಯ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸ್ವಸ್ತಿಕ್ ಮನೆಯ ಹಾಲ್ ನಲ್ಲಿರುವ ಕಿಟಕಿಗೆ ಬೆಲ್ಟ್ ಬಿಗಿದು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸೋಫಾಕ್ಕೆ ಓರಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಇದನ್ನ ಗಮನಿಸಿದ ತಾಯಿ ಕುತ್ತಿಗೆಯ ಸುತ್ತ ಬಿಗಿದಿದ್ದ ಬೆಲ್ಟ್ ಕತ್ತರಿಸಿ ಪಕ್ಕದ ಮನೆಯವರ ನೆರವಿನೊಂದಿಗೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತರುವ ಮೊದಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಸ್ವಸ್ತಿಕ್ ಆತ್ಮಹತ್ಯೆಗೆ ನಿಖರವಾದ ಕಾರಣಗಳು ಇದುವರೆಗೆ ಪತ್ತೆಯಾಗಿಲ್ಲ, ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.