ಉಡುಪಿ : ಇತ್ತೀಚಿಗೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಕುಖ್ಯಾತ ಅಂತರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇದೆ ಜೂನ್ 27ರಂದು ರಾತ್ರಿ ಮಂಟಾರು ಬೊಬ್ಬರ್ಯ ದೈವಸ್ಥಾನದ ಬಳಿಯ ಪವಿತ್ರ ಪೂಜಾರ್ತಿ ಎನ್ನುವವರ ಮನೆಗೆ ನುಗ್ಗಿ, ಸುಮಾರು 137 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿ ಅಬೂಬಕರ್ ಪರಾರಿಯಾಗಿದ್ದ. ಈ ಕುರಿತು ಶರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಂಡ ರಕ್ಷಿಸಿ ಕಾರ್ಯಾಚರಣೆಗೆ ಹೇಳಿದ ಪೊಲೀಸರು ಇತ್ತೇ ಬರ್ಪೆ ಅಬೂಬಕರ್ ನನ್ನ ವಶಕ್ಕೆ ಪಡೆದಿದ್ದಾರೆ. ಬಂದಿತನಿಂದ 7,50,000 ಮೌಲ್ಯದ 66.76 ಗ್ರಾಂ ತೂಕದ ಚಿನ್ನಾಭರಣ ಮತ್ತು ಕಳ್ಳತನ ಕೃತ್ಯಕ್ಕೆ ಬಳಿಸಿದ ಸ್ಕೂಟರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.