ಉಡುಪಿ : ಭಾವೀ ಪರ್ಯಾಯ ಮಠಾಧೀಶರದ ಶೀರೂರು ಶ್ರೀ ಶ್ರೀ ವೇದವರ್ಧನತೀರ್ಥರ ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯುತ್ತಿರುವ 5 ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ್ ಬೆಂಗಳೂರಿನ ವಿದ್ಯಾಪೀಠದಲ್ಲಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆಕಾರು, ಜಯರಾಮ ಆಚಾರ್ಯ ಅಧ್ಯಕ್ಷರು ತು.ಶಿ ಮಾ ಹಾಗೂ ಉದ್ಯಮಿ ದಿಲೀಪ್ ಸತ್ಯ ಇವರು ಉಪಸ್ಥಿತರಿದ್ದರು.
