Monday, July 28, 2025

spot_img

ಅಡಿಕೆ ಕದ್ದ ಕಳ್ಳರು: ನಾಲ್ವರನ್ನು ಬಂಧಿಸಿದ ಬೈಂದೂರು ಪೊಲೀಸ್‌ ರು

ಬೈಂದೂರು : 5.60 ಲಕ್ಷ ರೂಪಾಯಿ ಮೊತ್ತದ ಸಿಪ್ಪೆ ಅಡಿಕೆಯನ್ನು ಗೋಡೌನ್‌ ನಿಂದ ಕಳವು ಮಾಡಿದ ನಾಲ್ವರು ಕಳ್ಳರನ್ನು ಬೈಂದೂರು ಪೊಲೀಸ್‌ ರು ಬಂಧಿಸಿದ್ದಾರೆ. ಕಡಬ ಮೂಲದ ಸಂತೋಷ(35), ಕಲಘಟಗಿ ಶಾನೂರು ಬಾಬುಲಾಲ್ ನವಾಜ್/ ನವಾಜ್/ ಘಜ್ನಿ(31), ಭಟ್ಕಳ ಖ್ವಾಜಾ/ ಮಹಮ್ಮದ್ ಖ್ವಾಜಾ/ ಖಾಜಾ(26), ಮಹಮ್ಮದ್ ಸಾಧಿಕ್ / ಸಾಧಿಕ್(27) ಬಂಧಿತ ಆರೋಪಿಗಳು.

ಬೈಂದೂರು ತಾಲೂಕು ಯಡ್ತರೆ ಗ್ರಾಮದ  ಹಡಿನಗದ್ದೆ ಎಂಬಲ್ಲಿ, ಮಸೂದ್ ಪಟೇಲ್ ಎನ್ನುವವರು ಸುಮಾರು 60 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು, ಹಲಸು, ಮಾವು ರಬ್ಬರ್ ಇತರ ಬೇರೆ ಬೇರೆ ಕೃಷಿ ಮಾಡಿ ಕೊಂಡಿದ್ದರು ಇವರ ತೋಟದಲ್ಲಿ ಬೆಳೆದ ಅಡಿಕೆ, ಅಂದರೆ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ  ಚೀಲ ಮಾಡಿ ಗೋಡೌನ್ ನಲ್ಲಿ ಇಟ್ಟು ಕಪ್ಪು ಬಣ್ಣದ ಪ್ಯಾಸ್ಟಿಕ್ ಮುಚ್ಚಿ ಇಟ್ಟಿದ್ದರು.ಇದೇ ಮೇ 22ರಂದು ಗೋಡೌನ್‌ ಪರಿಶೀಲಿಸಿದಾಗ, ಗೋಡೌನ ಎದುರಿನ ಕಬ್ಬಿಣದ ಡ್ರಿಲ್ ನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು, ಅಲ್ಲದೆ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆ ಕಳವಾಗಿರುವ ಗಮನಕ್ಕೆ ಬಂದಿದೆ. ಸುಮಾರು 5 ಲಕ್ಷ 60 ರೂಪಾಯಿ ಮೌಲ್ಯದ ಅಡಿಮೆ ಕಳುವಾದ ಕುರಿತು ಮಸೂದ್ ಪಟೇಲ್ ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.
 ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದಂತೆ 2 ತಂಡ ರಚಿಸಿ ಪೊಲೀಸ್‌ ರು ತನಿಖೆ ಆರಂಭಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸುದರ ಜೊತೆಗೆ, ಕಳವು  ಮಾಡಿದ 455 ಕೆ.ಜಿ ಅಡಿಕೆ ಮತ್ತು ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿಸಲಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles