Saturday, July 26, 2025

spot_img

ಹೌದು ಸಂಖ್ಯೆಗಳು ಮಾತನಾಡುತ್ತವೆ !

ಜೀವನದ ಎಲ್ಲಾ ಘಟ್ಟಗಳಲ್ಲೂ ನಮ್ಮ ಕಾಲಾನಂತರವೂ ಕೂಡಾ ನಮ್ಮ ಬಗ್ಗೆ ಮಾತನಾಡುವುದು ಯಾರೆಂದರೆ ಸಂಖ್ಯೆಗಳು ! ! ನಮಗೆ ಗೊತ್ತಿಲ್ಲದೇ ನಮ್ಮ ಹುಟ್ಟಿನಿಂದಲೇ ಅದರೊಂದಿಗೆ ಬೆಸೆದುಕೊಂಡಿದ್ದೇವೆ .. ಅದೂ ಕೂಡ ಬೇರ್ಪಡಿಸಲಾಗದ ಬಂಧ !

ಯಾವ ವರ್ಷದಲ್ಲಿ ನಿಮ್ಮ ಮದುವೆಯಾಯ್ತು ? – ಯಾವುದೊ ಒಂದು ದಿನಾಂಕ ಹೇಳುವಿರಿ . . ಅಲ್ಲಿ ಸಂಖ್ಯೆಗಳು !

ಯಾವಾಗ ಇಲ್ಲಿಗೆ ಶಿಫ್ಟ್ ಆದ್ರಿ ? – ಯಾವುದೊ ಒಂದು ತಿಂಗಳು ಅಥವಾ ವರ್ಷ ಹೇಳುವಿರಿ — ಅದೂ ಸಂಖ್ಯೆಗಳು.

ಮಗ ಎಷ್ಟನೇ ಕ್ಲಾಸ್ ? ಅಗೈನ್ ಸಂಖ್ಯೆಗಳು . .

ಒಹ್ ಅವರು ಆಗ್ಲೇ 2009 ರಲ್ಲೇ ತೀರಿಕೊಂಡ್ಬಿಟ್ರು !! ಮುಕ್ತಾಯಕ್ಕೂ ಸಂಖ್ಯೆಗಳು !

ಹೀಗೆ ಯೂನಿವರ್ಸ್ ಅಥವಾ ಭಗವಂತ ಸಂಖ್ಯೆಗಳ ಮೂಲಕ ನಮ್ಮಲ್ಲಿ ವಿಧಿಯ ಆಗ್ರಹ ಮತ್ತು ಅನುಗ್ರಹ ಎರಡನ್ನೂ ತಿಳಿಸಬಯಸುತ್ತಾನೆ ಎಂದು ಅರ್ಥೈಸಬಹುದು ,

ಹೌದು ಸಂಖ್ಯೆಗಳು ಮಾತನಾಡುತ್ತವೆ !

ನಮ್ಮ ಜನ್ಮದಿನಾಂಕವು ನಮ್ಮ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ . .ಮಗುವಿನಿಂದ ಹಿಡಿದು ವೃದ್ದಾಪ್ಯದವರೆಗೂ ಜೀವನದ ಹಲವು ಮಜಲುಗಳಲ್ಲಿ ಬರುವ ಯೋಗ ಮತ್ತು ದೆಸೆ ಗಳನ್ನೂ ಸೂಕ್ಷವಾಗಿ ತಿಳಿಸುತ್ತದೆ . .ನಾವು ಆ ಫ್ರೀಕ್ವೆನ್ಸಿ ಗೆ ಕನೆಕ್ಟ್ ಆಗುವುದಷ್ಟೇ ಮುಖ್ಯ . .ಅರ್ಥಾತ್ ಮೊದಲಿಗೆ ಅದನ್ನು ತಿಳಿಯುವುದು . .ನಮ್ಮ ಜೀವನದ ಆಗಿಹೋದ ಪ್ರಮುಖ ಘಟನೆಗಳನ್ನು ಸಂಖ್ಯಾಶಾಸ್ತ್ರದೊಂದಿಗೆ ತಾಳೆಮಾಡಿದಾಗ ಸಂಖ್ಯೆಗಳು ಸರಿಯಾದ ಉತ್ತರ ಬರೆದಿಟ್ಟಿರುತ್ತವೆ . . ನಂತರವೇ ಅದನ್ನು ಒಪ್ಪಿಕೊಳ್ಳುವ ಮನೋಸ್ಥಿತಿ ಬರುತ್ತದೆ . ಮತ್ತು ಸಂಖ್ಯೆಗಳಿಂದ ಮಾರ್ಗದರ್ಶನ ಸಿಗುತ್ತದೆ .

ಒಬ್ಬ ವಿದ್ಯಾರ್ಥಿ ಯಾಕೆ ಜಾಣನಾಗಿದ್ದಾನೆ /ಳೆ ? ಅಥವಾ ಯಾಕೆ ಓದು ವಿದ್ಯಾರ್ಥಿಗೆ ತಲೆಗೆ ಹತ್ತುವುದಿಲ್ಲ ? ಯಾವ ಕೆರಿಯರ್ ಈ ವ್ಯಕ್ತಿಗೆ ಸೂಕ್ತ, ಯಾವಾಗ ಪ್ರಮೋಷನ್ ಆಗಬಹುದು , ಸರಕಾರೀ ಉದ್ಯೋಗವೇ ಅಥವಾ ಸ್ವಂತ ಉದ್ಯೋಗವೇ , ಉದ್ಯೋಗದಲ್ಲಿ ಯಾಕೆ ಕಿರಿಕಿರಿ ಉಂಟಾಗ್ತಾ ಇದೆ , ಕಂಪೆನಿಯ ಹೆಸರು ಏನೆಂದು ಇಟ್ಟರೆ ಸೂಕ್ತ, ಯಾವಾಗ ಅದನ್ನು ಪ್ರಾರಂಭಿಸಿದರೆ ಸೂಕ್ತ , ಈ ವರ್ಷ ಸಾಲ ತೆಗೆದುಕೊಳ್ಳಬಹುದೇ ಬೇಡವೇ , ಮದುವೆ ಯಾವಾಗ ಆಗಬಹುದು ಯಾಕೆ ತಡವಾಗ್ತಾ ಇದೆ , ಸಂಗಾತಿಯ ಜನ್ಮದಿನ ನನಗೆ ಸರಿ ಹೊಂದುತ್ತದೆಯೇ , ಅನ್ಯೋನ್ನತೆ ಇರುತ್ತದೆಯೇ , ಸಂತಾನ ಭಾಗ್ಯ ಇದೆಯೇ , ವಿವಾಹಾನಂತರ ಭಾಗ್ಯೋದಯ ಇದೆಯೇ , ಯಾಕೆ ಸಂಗಾತಿಯೊಂದಿಗೆ ಅನ್ಯೋನ್ನತೆ ಇಲ್ಲ , ಅರೋಗ್ಯ ಯಾಕೆ ಪದೇ ಪದೇ ತೊಂದರೆ ಕೊಡುತ್ತಿದೆ , ಯಾಕೆ ನನ್ನ ವಾಹನ ಅಪಘಾತವಾಯ್ತು ಇನ್ನೂ ಮುಂತಾದ ಹಲವು ವಿಷಯಗಳಿಗೆ ಸಂಖ್ಯೆಗಳು ಉತ್ತರಿಸುತ್ತವೆ . .

ವ್ಯಕ್ತಿಯ ಸ್ವಭಾವ, ಯಾವ ವಿಷಯದಲ್ಲಿ ಅವನು ಪ್ರಬಲನಾಗಿದ್ದಾನೆ, ಯಾವ ವಿಷಯದಲ್ಲಿ ದುರ್ಬಲನಾಗಿದ್ದಾನೆ ಎಲ್ಲವೂ ಸಂಖ್ಯೆಗಳಲ್ಲಿದೆ .

ಮುಂದಿನ ವರ್ಷ ನನಗೆ ಏನನ್ನು ಕೊಡಲು ಬಯಸುತ್ತದೆ ಎಂದು ನಾವು ತಿಳಿಯಬಹುದು . ಮಾರ್ಗದರ್ಶನದಂತೆ ನಡೆಯಬಹುದು . .

ನಮ್ಮ ಜನ್ಮದಿನಾಂಕವು ಎಷ್ಟೆಲ್ಲಾ ವಿಷಯಗಳನ್ನು ಅಡಗಿಸಿಟ್ಟುಕೊಂಡಿದೆ , ಅದನ್ನು ಡೆಕೋಡ್ ಮಾಡುವ ಕಲೆಯೇ ಸಂಖ್ಯಾಶಾಸ್ತ್ರ!!


Dinesh – Numerology consultant
95919 06335


Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles