Thursday, October 23, 2025

spot_img

ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ, ಸರ್ವರ್ ಸಮಸ್ಯೆ: ಎಬಿವಿಪಿ ಮನವಿ

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ KCET ಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ, ಸರ್ವರ್ ಸಮಸ್ಯೆಯನ್ನು ಖಂಡಿಸಿ ಅಜ್ಜರಕಾಡು ಯುದ್ಧಸ್ಮಾರಕದ ಬಳಿ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರರ ಮೂಲಕ ಮನವಿ ನೀಡಲಾಯಿತು. ನಗರ ಕಾರ್ಯದರ್ಶಿಯಾದ ಮಾಣಿಕ್ಯ ಭಟ್ ಮಾತನಾಡಿ ಈ ಬಾರಿ ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿನ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಅನೇಕ ಗೊಂದಲಗಳನ್ನು ಸೃಷ್ಟಿಸಿರುವುದುಂಟು. KEA ಅವರ ಸರ್ವರ್ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ಅನ್ಯಾಯವಾಗಿ ವಸೂಲಿ ಮಾಡಿರುವ 75೦ ರೂ/- ಶುಲ್ಕವನ್ನು ಮರುಪಾವತಿಸಬೇಕು ಎಂದರು.

ಜಿಲ್ಲಾ ಸಂಚಾಲಕರಾದ ಶ್ರೇಯಸ್ ಮಾತನಾಡಿ ರಾಜ್ಯ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳ ಸುಳಿಗೆ ಸಿಲುಕಿ, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಜೇಬಿಗೂ ಕತ್ತರಿ ಹಾಕುವಂತಹ ಪರಿಸ್ಥಿತಿಗೆ ತಲುಪಿರುವುದು ತುಂಬಾ ಶೋಚನೀಯ. ಹೀಗೆ ಮುಂದುವರೆದರೆ ತರಗತಿಯೊಳಗೆ ಅಥವಾ ಕಾಲೇಜಿನ ಗೇಟಿನೊಳಗೆ ಪ್ರವೇಶಿಸಲು ಶುಲ್ಕ ವಿಧಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೀಗಾಗಿ ಇಂದು ನಾವು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಕೂಡಲೇ ಸೀಟ್ ಬ್ಲಾಕಿಂಗ್ ದಂಧೆ ಯೋಚನೆಯನ್ನು ಕೈಬಿಡುವಂತೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಹಾಗೂ ದಂಧೆಯಲ್ಲಿ ಭಾಗಿಯಾಗಿರುವ ಕಾಲೇಜುಗಳಿಗೆ ಕಾನುನಿನ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕೆಂದು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಆಗ್ರಹಿಸುತ್ತದೆ. ಪ್ರತಿಭಟನೆಯಲ್ಲಿ ನಗರ ಸಹ ಕಾರ್ಯದರ್ಶಿ ಶಿವನ್ ಮತ್ತು ಪ್ರಮುಖರಾದ ಮನೀಶ್, ಅಂಕಿತಾ, ರಂಜಿತ್, ಕಾರ್ತಿಕ್,ಮುತ್ತು, ಧನುಷ್, ಸಾಧನ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles