Wednesday, March 4, 2026

spot_img

ಮನೆಯಲ್ಲಿ ಅಂದರ್‌ ಬಾಹರ್‌ ಆಟ: 6 ಜನ ವಶಕ್ಕೆ

ಕೋಟ : ಮನೆಯೊಂದರ ಬಳಿ ಅಂದರ್‌ ಬಾಹರ್‌ ಇಸ್ಪೀಟು ಆಟ ಆಡುತ್ತಿದ್ದ 6 ಜನರನ್ನು ಪೊಲೀಸ್‌ ರು ಬಂಧಿಸಿದ ಘಟನೆ ಅಚ್ಲಾಡಿ ಗ್ರಾಮದಲ್ಲಿ ನಡೆದಿದೆ. ಗರಿಕೆಮಠ ನಿವಾಸಿ ರಾಜು ಶೆಟ್ಟಿ(71), ಮೊಗೆಬೆಟ್ಟು ರಾಜು ಶೆಟ್ಟಿ(57), ರಂಗನಕೆರೆ ರಮಾನಂದ ಶೆಟ್ಟಿ(21), ವಾರಂಬಳ್ಳಿ ಸಂತೋಷ(56), ಮಧುವನ ರಾಜೀವ ಶೆಟ್ಟಿ(65), ಪಡುಮುಂಡು ಕೃಷ್ಣ(40)ಬಂಧಿತ ಆರೋಪಿಗಳು. ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಗರಿಕೆಮಠ ಎಂಬಲ್ಲಿಯ ಅರೋಪಿ ರಾಜು ಶೆಟ್ಟಿ ಎಂಬವರ ಮನೆಯ ಬಳಿ ಅಂದರ್‌ ಬಾಹರ್‌ ಎಂಬ ಇಸ್ಪೀಟು ಆಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ ಕೋಟ ಪೊಲೀಸ್‌ ರು ಧಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದು ಹಾಗೂ ಆಟಕ್ಕೆ ಬಳಸಿದ 15450 ರೂಪಾಯಿ, 3 ಕಾರು, 2 ಸ್ಕೂಟರ್‌, ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles