ಉಡುಪಿ : ಮುಂಜಾನೆ ನಾಡ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿದ ಬೋಟಿನಲ್ಲಿದ್ದ ನಾಲ್ವರು ಮೀನುಗಾರರಲ್ಲಿ ಮೂವರು ಮೀನುಗಾರರು ನೀರು ಪಾಲಾದ ಘಟನೆ ಗಂಗೊಳ್ಳಿಯ ಸಮುದ್ರದಲ್ಲಿ ನಡೆದಿದೆ.

ಸುರೇಶ್ ಖಾರ್ವಿ(45), ರೋಹಿತ್ ಖಾರ್ವಿ (38), ಜಗದೀಶ್ ಖಾರ್ವಿ (36) ನೀರು ಪಾಲಾದ ಬಳಿಕ ನಾಪತ್ತೆಯಾಗಿದ್ದು, ಸಂತೋಷ್ ಎನ್ನುವ ಮೀನುಗಾರ ಈಜಿಕೊಂಡು ದಡ ಸೇರಿದವರು.

ಮೀನುಗಾರಿಕೆಗೆ ತೆರಳಿದ ವೇಳೆ ಅಚಾನಕ್ಕಾಗಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ವಾಪಸ್ ಮರಳುವಾಗ ಓರ್ವ ಮೀನುಗಾರ ಸಮುದ್ರಕ್ಕೆ ಬಿದ್ದಿದ್ದಾನೆ. ಸಮುದ್ರಕ ಬಿದ್ದ ಸಹವರ್ತಿಯನ್ನು ರಕ್ಷಿಸುವ ಭರದಲ್ಲಿ ಉಳಿದವರು ಸಮುದ್ರ ಪಾಲಾಗಿದ್ದು ಸದ್ಯ ಓರ್ವ ದಡ ಸೇರಿದ್ದು ಮೂವರು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಮೀನುಗಾರರನ್ನ ಹುಡುಕುವ ಪ್ರಕ್ರಿಯೆ ನಡೆಸಲಾಗುತ್ತಿದೆ.