ಉಡುಪಿ : ಸಿದ್ದಾಪುರ ಹಳ್ಳಿಹೊಳೆ ಗ್ರಾಮದ ಸುಳ್ಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಧರ್ಮ ನಾಯಕ್ / ಕುಬೇರಪ್ಪ (49) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ಬೆಳಿಗ್ಗೆ ಶಾಲೆಗೆ ತೆರಳುವ ದಾರಿಯಲ್ಲಿ ಕಮಲಶಿಲೆಯ ಪಾರೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಮೂಲದ ಕುಬೇರಪ್ಪ ಅವರು ಸಿದ್ದಾಪುರ ಹೊಸಂಗಡಿ ಕೆಪಿಸಿ ಕಾಲನಿಯಲ್ಲಿ ಇರುವ ಸರಕಾರಿ ಕ್ವಾಟ್ರಸ್ ನಲ್ಲಿ ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ವಾಸವಾಗಿದ್ದರು. ಸೋಮವಾರ ಮುಂಜಾನೆ ಎಂದಿನಂತೆ ತಮ್ಮ ಬೈಕ್ನಲ್ಲಿ ಶಾಲೆಗೆ ಹೊರಟಿದ್ದ ಅವರು ಕಮಲಶಿಲೆಯ ಬಾರೆ ಬಳಿ ಬೈಕ್ ಅನ್ನ ರಸ್ತೆಯ ಬದಿಯಲ್ಲಿಟ್ಟು ರೈನ್ ಕೋಟ್ ಧರಿಸಿರುವಂತೆಯೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾವು ವಾಸವಾಗಿದ್ದ ಕೆಪಿಸಿ ಕಾಲನಿಯಲ್ಲಿಯೇ ಹಿಟ್ಟಿನ ಗಿರಣಿ ಮತ್ತು ಕುರಿ ಮೇಕೆ ಫಾರ್ಮ್ ಮಾಡಿಕೊಂಡಿದ್ದ ಕುಬೇರಪ್ಪ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇತ್ತೀಚಿಗೆ ಕ್ಷಿಪಣಿನಲ್ಲಿ ಸಾಲ ಮಾಡಿಕೊಂಡಿದ್ದು ಈ ಬಗ್ಗೆ ಸಾಲ ಪತ್ರವು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿತ್ತು ಎನ್ನಲಾಗಿದ್ದು, ಹಣಕಾಸಿನ ಸಮಸ್ಯೆಯಿಂದಲೇ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮುಖ್ಯ ಶಿಕ್ಷಕರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಇಂದು ಸುಳ್ಗೋಡು ಶಾಲೆಗೆ ರಜೆ ಘೋಷಿಸಲಾಗಿತ್ತು.


