ಕೋಟ: ಇದೇ ತಿಂಗಳ 25ನೇ ತಾರೀಕು ಆದಿತ್ಯವಾರ ಆನೆಗುಡ್ಡೆಯಲ್ಲಿ ಜಿಲ್ಲಾ ಮಟ್ಟದ ಭಜನಾ ಕಮ್ಮಟೋತ್ಸವ ಆಯೋಜಿಸಲಾಗಿದೆ. ಶ್ರೀಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಸಿ, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕುಂದಾಪುರ ತಾಲೂಕು, ಶ್ರೀರಾಮ ಕೋಟೀಶ್ವರ ಕಲಾಸಂಘ ಕೋಟೇಶ್ವರ ಹಾಗೂ ತಾಲೂಕು ಭಜನಾ ಮಂಡಳಿಗಳ ಸಹಯೋಗದಲ್ಲಿ ನಡೆಯುವ ಕಮ್ಮಟೋತ್ಸವ ಹಿನ್ನಲೆಯಲ್ಲಿ ಬೆಳಿಗ್ಗೆ 8.30 ರಿಂದ ಆನೆಗುಡ್ಡೆಯ ಸ್ವಾಗತ ಗೋಪುರದಿಂದ ಭವ್ಯ ಶೋಭಾ ಯಾತ್ರೆ ಹೊರಟು ಆನೆಗುಡ್ಡೆಯ ಗಣಪತಿ ದೇವಸ್ಥಾನಕ್ಕೆ ಪ್ರದಕ್ಷಣೆ ಹಾಕಿ ಬಳಿಕ ಭವ್ಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಭಜನಾ ಕಮ್ಮಟೋತ್ಸವ ಕಾರ್ಯಕ್ರಮವನ್ನು ಉಉಡಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಕಮ್ಮಟೋತ್ಸವದಲ್ಲಿ ಭಜನೆ ಹಾಗೂ ಭಜನೆ ತರಬೇತಿ, ಭಜನೆ ಮಂಗಲೋತ್ಸವ ನಂತರ ಭೋಜನ ಪ್ರಸಾದ ಆಯೋಜಿಸಲಾಗಿದೆ. ಭಾಗವಹಿಸುವ ಎಲ್ಲಾ ತಂಡದವರಿಗೂ ಸಮವಸ್ತ್ರ ಕಡ್ಡಾಯವಾಗಿದ್ದು, ಭಾಗವಹಿಸಿದ ಎಲ್ಲಾ ಭಜನಾ ತಂಡದವರಿಗೂ ಕ್ಷೇತ್ರದ ಪ್ರಸಾದ ಹಾಗೂ ಅಭಿನಂದನಾ ಪತ್ರ ದೊಂದಿಗೆ ಗೌರವಧನ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಭಜನೆ ತಂಡದವರು ಬೆಳಿಗ್ಗೆ 8.30 ಕ್ಕೆ ಸ್ವಾಗತ ಗೋಪುರದ ಹತ್ತಿರ ಬಂದು ಸಹಕರಿಸುವಂತೆ ಆಯೋಜಕರು ಕೋರಿದ್ದಾರೆ.