ಕೋಟ : ಕರಾವಳಿಯ ಪುರಾತನ ಬಂದರಿನಲ್ಲಿ ಐಷಾರಾಮಿ ಬೃಹತ್ ಹಡಗು ನೀರಿಗೆ ಇಳಿಯುವ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ಶ್ವೇತ ಬಣ್ಣದ ಬೃಹತ್ ಅಪಾರ್ಟ್ ಮೆಂಟ್ ರೀತಿಯಲ್ಲಿ ಕಂಡು ಬಂದ ಈ ಹಡಗು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದಲ್ಲಿರುವ ಹಂಗಾರಕಟ್ಟೆ ಪುರಾತನ ಬಂದರಿನಲ್ಲಿ ನಿರ್ಮಾಣವಾಗಿದೆ.

ವಿಶ್ವದ ಎರಡನೇ ಅತೀ ದೊಡ್ಡ ಸರ್ವ ಖುತು ಬಂದರು ಉಡುಪಿ ಕೇವಲ ಮೀನುಗಾರಿಕೆಗೆ ಮಾತ್ರ ಸೀಮಿತವಲ್ಲ ಜಗತ್ತೇ ತಿರುಗಿನೋಡುವಂತ ಐಷಾರಾಮಿ ಹಡಗು ತಯಾರಿಕೆಗೂ ಕಮ್ಮಿಯಿಲ್ಲ ಅನ್ನೋದನ್ನ ಸಾಬೀತಾಗಿದೆ. ಈ ಹಿಂದೆ ಸಿಂಗಾಪೂರ್ ದೇಶಕ್ಕೆ ರವಾನೆಯಾದ ಫ್ಯೂಗ್ರೋ ಸ್ಕೌಟ್ ಹೆಸರಿನ ಸಂಶೋಧನಾ ಹಡಗು ಉಡುಪಿಯ ಮಲ್ಪೆ ಬಂದರಿನ ಟೆಗ್ಮಾಶಿಪ್ ಯಾರ್ಡ್ ನಲ್ಲಿ ನಿರ್ಮಾಣವಾಗಿತ್ತು.

ಇದೀಗ ಉಡುಪಿ ಜಿಲ್ಲೆಯ ಅತ್ಯಂತ ಪುರಾತನ ನೈಸರ್ಗಿಕ ಬಂದರು ಹಂಗಾರಕಟ್ಟೆ ಯಲ್ಲಿ ಬಿಳಿ ಬಣ್ಣದ ಅಪಾರ್ಟ್ ಮೆಂಟ್ ನಂತೆ ಕಾಣುವ ಬೃಹತ್ ಗಾತ್ರದ ಡೆಲ್ಟಿನ್ ರೋಯಾಲೆ ಕ್ಯಾಸಿನೋ ಕ್ರೋಸ್ ಹಡಗು ಕ್ಯಾಸಿಯೋ ಆಟಕ್ಕಾಗಿ ಸಿದ್ಧ ಗೊಳಿಸಲಾಗಿದೆ. ಸದ್ಯ ಈ ಹಡಗು ಹಂಗಾರಕಟ್ಟೆ ಬಂದರಿಂದ ಹೊರಟು ಗೋವಾ ರಾಜ್ಯವನ್ನ ತಲುಪಲಿದೆ.


