Monday, March 2, 2026

spot_img

ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಜೋಗಿ ಹೃದಯಾಘಾತದಿಂದ ಸಾವು

ಕುಂದಾಪುರ: ಉತ್ತರ ಭಾರತಕ್ಕೆ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಅರಣ್ಯ ಇಲಾಖೆಯ (ಐಎಫ್‌ಎಸ್‌) ಅಧಿಕಾರಿ ಉದಯ ಜೋಗಿ (59) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು 10 ದಿನಗಳ ಹಿಂದೆ ಪತ್ನಿ ಹಾಗೂ ತಮ್ಮ ಸ್ನೇಹಿತರೊಂದಿಗೆ ಉತ್ತರ ಭಾರತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ. ಜೋಗಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇಬ್ಬರು ಪುತ್ರರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಐಎಫ್‌ಎಸ್‌ ಅಧಿಕಾರಿಯಾಗಿದ್ದ ಅವರು ಅರಣ್ಯ ಇಲಾಖೆಯಲ್ಲಿ ಉಪ ಅರಣ್ಯಸಂರಕ್ಷಣಾಧಿಕಾರಿಯಾಗಿದ್ದಾರೆ.
ಉದಯ ಜೋಗಿ ಅವರ ಮೃತದೇಹವನ್ನು ಸೋಮವಾರ ಹುಟ್ಟೂರಿಗೆ ತರಲಾಗುವುದು ಎಂದು ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles