ಉಡುಪಿ: ಗುಂಡಿಬೈಲು ಮುಖ್ಯ ರಸ್ತೆಯಲ್ಲಿ ದನವೊಂದಕ್ಕೆ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯವಾಗಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ ಪಶು ವೈದ್ಯರಾದ ಡಾಕ್ಟರ್ ಸಂದೀಪ್ ಶೆಟ್ಟಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಚಿಕಿತ್ಸೆ ನೀಡಲಾಯಿತು. ಗುಂಡಿಬೈಲು ಬ್ರಾಹ್ಮಣ ಸಭಾಭವನದ ಬಳಿ ದನವನ್ನು ಇರಿಸಲಾಗಿದ್ದು, ದನಕ್ಕೆ ಪೆಟ್ಟು ತುಂಬಾ ಆದರೂ ಮುಂದಿನ ದಿನಗಳಲ್ಲಿ ಸರಿಯಾದ ಚಿಕಿತ್ಸೆ ಹಾಗೂ ಆಶ್ರಯ ಸಿಕ್ಕಿದಲ್ಲಿ ಅಪಾಯದಿಂದ ಪಾರಾಗಿ ದನ ಗುಣಮುಖವಾಗುವುದೆಂದು ವೈದ್ಯರು ತಿಳಿಸಿದ್ದಾರೆ. ಸ್ಥಳೀಯರು ಗೋವಿನ ಚೇತರಿಕೆಗೆ ಬೇಕಾಗುವ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದ್ದು, ಸ್ಥಳೀಯರ ಗೋ ಪ್ರೇಮ ನಿಜವಾಗಿಯೂ ಶ್ಲಾಘನೀಯ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.


