ಸಾಲಿಗ್ರಾಮ: ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಪಾರ್ವತಿ ಮಹಾಬಲ ಶೆಟ್ಟಿ ಆಸ್ಪತ್ರೆ ಮುದ್ದುಮನೇ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಜಂಟಿಯಾಗಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದ ನಡೆಯಿತು. ಕಾರ್ಯಕ್ರಮವನ್ನು ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ರೋ. ತಿಮ್ಮ ಪೂಜಾರಿ ಉದ್ಘಾಟಿಸಿದರು.

ಶಂಕರ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದರು, ಡಾ. ಮನೋಜ್ ಭಟ್ ನೇತ್ರ ತಪಾಸಣೆಯ ಕುರಿತು ಮಾಹಿತಿ ನೀಡಿದರು. ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಪ್ರಯೋಜನ ಪಡೆಯಲು ಸಾರ್ವಜನಿಕರಿಗೆ ಕರೆ ನೀಡಿದರು.

142 ಮಂದಿ ಶಿಬಿರಾರ್ತೀಗಳು ಶಿಬಿರದ ಪ್ರಯೋಜನ ಪಡೆದುಕೊಂಡರು, 42 ಮಂದಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಬರುವಂತೆ ವೈದ್ಯರು ತಿಳಿಸಿ, 24 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ ಗೆ ಆಯ್ಕೆ ಆದರು. ಕಲ್ಪನ ಕಾರ್ಯಕ್ರಮ ನಿರೂಪಿಸಿ ಮತ್ತು ಧನ್ಯವಾದ ಸಲ್ಲಿಸಿದರು.