ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರುಗಳು ಸರ್ಕಾರದ ಅಧಿಸೂಚನೆಯಂತೆ
ನಮೂನೆ-3 ಮತ್ತು ನಮೂನೆ-3ಎ ಗಳನ್ನು ಸೃಜಿಸಿ, ತುರ್ತಾಗಿ ನಿಗದಿತ ಕಾಲಾವಧಿಯೊಳಗೆ ನೀಡುವಂತೆ ಆದೇಶಿಸಿದ್ದು, ಇದುವರೆಗೂ ಇ- ಆಸ್ತಿ ನಮೂನೆ-3 ನ್ನು ಪಡೆಯದ ಸ್ವತ್ತುಗಳಿಗೆ ಸಂಬಂಧಿಸಿದಂತೆ ನಗರಸಭಾ ಕಛೇರಿಯಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಪಡೆದು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಿ, ಅಧಿಕೃತ ನಮೂನೆ-3 ಅಥವಾ ಅನಧಿಕೃತ ನಮೂನೆ-3ಎ ಗಳನ್ನು ಮಾರ್ಚ್ 31 ರ ಒಳಗಾಗಿ ಪಡೆದುಕೊಳ್ಳಬೇಕು.

ನಮೂನೆ-3ಎ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಭೀತು ಪಡಿಸುವ ದಿನಾಂಕ: 10-09-2024ರ ಪೂರ್ವದಲ್ಲಿ ನೋಂದಾಯಿತ ವಿಭಾಗ ಪತ್ರ/ಕ್ರಯ ಪತ್ರ/ದಾನ ಪತ್ರ/ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣ ಭಾರ ಪ್ರಮಾಣ ಪತ್ರ, ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿರುವ ರಶೀದಿ ಪ್ರತಿ (ವಿವರ ಪಟ್ಟಿ ಮತ್ತು ಚಲನ್), ಆರ್‌ಟಿಸಿ (15 ದಿನಗಳ ಒಳಗಿನ ಒರಿಜಿನಲ್), ಮಾಲೀಕರ ಮತದಾರರ ಗುರುತಿನ ಚೀಟಿ & ಮೊಬೈಲ್ ಸಂಖ್ಯೆ/ಡ್ರೈವಿಂಗ್ ಲೈಸನ್ಸ್/ಪಾನ್ ಕಾರ್ಡ್/
ಪಡಿತರ ಚೀಟಿ , ಮಾಲೀಕರ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಸ್ವತ್ತಿನ ಕಲರ್ ಫೋಟೊ ಹಾಗೂ ವಿದ್ಯುತ್ ಬಿಲ್ (ಆರ್.ಆರ್ ನಂಬ್ರ) ಮತ್ತು ನಳ್ಳಿ ಜೋಡಣಾ ಸಂಖ್ಯೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭಾ ಕಚೇರಿಯ ಕಂದಾಯ ವಿಭಾಗ ಮತ್ತು ತಮ್ಮ ಹತ್ತಿರದ ಉಪಕಚೇರಿಗಳನ್ನು ಅಥವಾ ವೆಬ್‌ಸೈಟ್ www.udupicity.mrc.gov.in , ಇ-ಮೇಲ್ : ka.udupi.cmc@gmail.com ಹಾಗೂ ಸಹಾಯವಾಣಿ ಸಂಖ್ಯೆ: 0824-2520306 ಅನ್ನು ಸಂಪಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.


