Sunday, July 6, 2025

spot_img

ಧರ್ಮಸಿಂಧು ಸ್ಪಿರಿಚುವಲ್ ಲೈಫ್‌ನಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕುಂದಾಪುರ : ಮುಳ್ಳುಗುಡ್ಡೆ, ಕುಂದಾಪುರದಲ್ಲಿರುವ ಧರ್ಮಸಿಂಧು ಸ್ಪಿರಿಚುವಲ್ ಲೈಫ್‌ನಲ್ಲಿ ಮಹಾಶಿವರಾತ್ರಿ ಮಹೋತ್ಸವ 2025 ಬಹಳ ಅದ್ದೂರಿಯಾಗಿ ನಡೆಯಿತು. ಪರಮಶಿವನ ಭಕ್ತರು ಈ ಮಹಾ ಧಾರ್ಮಿಕ ಸೇವೆಯಲ್ಲಿ ಭಾಗವಹಿಸಿ ಶಿವನ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಅನುಭವವನ್ನು ಪಡೆದರು. ಈ ಪವಿತ್ರ ಸಂದರ್ಭದಲ್ಲಿ ಜಾತಿ ಮತ ಭೇದವಿಲ್ಲದೇ ನೆರೆದ ಶಿವ ಭಕ್ತರು 1,00,800 ಸಂಖ್ಯೆಯಲ್ಲಿ ಶಿವ ಪಂಚಾಕ್ಷರಿ ಜಪ, 10,080 ತರ್ಪಣ, ಮತ್ತು 1,008 ಸಂಖ್ಯೆಯಲ್ಲಿ ಹವನ ನೆರವೇರಿಸಿದ್ದು, ಇದರಿಂದ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಳಗೊಂಡಿತು. ಧರ್ಮಸಿಂಧು ಸ್ಪಿರಿಚುವಲ್ ಲೈಫ್ ಸಂಸ್ಥಾಪಕ ಡಾ. ರಾಘವೇಂದ್ರ ಉಳ್ಳೂರ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿತು.

ಸಂಜೆ 7 ರಿಂದ 7:30 ರವರೆಗೆ ಜಪ ದೀಕ್ಷೆ,ಸಂಜೆ7:30 ರಿಂದ 10:00 ರವರೆಗೆ ಜಪ, ತರ್ಪಣ, ಹವನ
ಪ್ರಸಾದ ವಿತರಣೆ, ರಾತ್ರಿ 9:30 ರಿಂದ ಪ್ರಭಾತದವರೆಗೆ ಶಿವನ ಭಜನೆ, ಭಕ್ತಿಗೆ ತೊಡಗುವ ಕಾರ್ಯಕ್ರಮಗಳು ನಡೆಯಿತು. ಅನೇಕ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು, ಧಾರ್ಮಿಕ ಸೇವೆಯಲ್ಲಿ ತಮ್ಮ ಸಮರ್ಪಣಾ ಭಾವ ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಭಕ್ತಜನರಿಗೆ, ಸ್ವಯಂಸೇವಕರಿಗೆ ಹಾಗೂ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಸಾಧಕರಿಗೆ ಧರ್ಮಸಿಂಧು ಸ್ಪಿರಿಚುವಲ್ ಲೈಫ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ವೈದಿಕ ಮತ್ತು ತಾಂತ್ರಿಕ ಕ್ರಮದ ಈ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಹವನದ ಹೊಗೆಯಲ್ಲಿ ಶಿವನ ದರ್ಶನ ಪಡೆದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles