ಕಾಪು : ಉದ್ಯಾವರದಲ್ಲಿ ಇತ್ತೀಚಿಗೆ ನಡೆದ ಎಟಿಎಂ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಂಜನಾಡಿ ಸಮೀಪದ ಅಸೈಗೋಳಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (24) ಹಾಗೂ ಮಂಗಳೂರು ಕಣ್ಣೂರು ಪಡೀಲ್ ನಿವಾಸಿ ಯಾಸೀನ್(21) ಬಂಧಿತ ಆರೋಪಿಗಳು.

ಆರೋಪಿಗಳು ಇದೇ ಫೆ.12ರಂದು ಬೆಳಗಿನ ಜಾವ ಉದ್ಯಾವರ ಕೆನರಾ ಬ್ಯಾಂಕ್ ATM ಪ್ರವೇಶಿಸಿ. ATM ಒಡೆಯಲು ಯತ್ನಿಸಿದಾಗ ಸೈರನ್ ಮೊಳಗಿದೆ. ಬಳಿಕ ಭಯದಿಂದ ಪರಾರಿಯಾಗಿದ್ದ ಆರೋಪಿಗಳಿಗಾಗಿ ಶೋಧ ನಡೆಸಲಾಗಿತ್ತು. ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಮಂಗಳೂರಿನ ಬಂದರನಲ್ಲಿ ಫೆ.26ರಂದು ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ದ್ವಿಚಕ್ರ ವಾಹನ, ಜಾಕೆಟ್, ಹೆಲ್ಮೆಟ್, ಕ್ಯಾಪ್, ಹ್ಯಾಂಡ್ ಗ್ಲೌಸ್, ಕತ್ತಿ ಹಾಗೂ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಯಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್ ಮಾನೆ, ಪಡುಬಿದ್ರಿ ಠಾಣಾ ಪಿಎಸ್‌ಐ ಅನಿಲ್ ಕುಮಾರ್ ಟಿ ನಾಯ್ಕ್ , ಕಾಪು ಠಾಣೆಯ ಪಿಎಸ್‌ಐ ರಮೇಶ್ ನಾಯ್ಕ್, ಹಾಗೂ ಕಾಪು ಠಾಣೆಯ ಸಿಬ್ಬಂದಿ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ, ಪ್ರಸಾದ್, ಪಡುಬಿದ್ರಿ ಠಾಣೆಯ ಎ ಎಸ್ ಐ ರಾಜೇಶ್, ಸಿಬ್ಬಂದಿ ಸಂದೇಶ, ಶಿರ್ವ ಠಾಣೆ ಸಿಬ್ಬಂದಿ ಸಿದ್ದರಾಯ, ಜೀವನ್ ಪಾಲ್ಗೊಂಡಿದ್ದರು.