Saturday, July 5, 2025

spot_img

ಡಲ್ಲಾಸ್ ನಲ್ಲಿ ಶ್ರೀಕೃಷ್ಣವೃಂದಾವನದ ೬ ನೆಯ ವಾರ್ಷಿಕೋತ್ಸವ

ಡಲ್ಲಾಸ್ : ವಿಶ್ವದಾದ್ಯಂತ ಶ್ರೀ ಕೃಷ್ಣ ಭಕ್ತಿಯ ಶಾಶ್ವತ ಪ್ರಚಾರಕ್ಕಾಗಿ ಪರಮ ಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ಮಹಾನಗರದಲ್ಲಿ ಸ್ಥಾಪಿಸಿರುವ ಪುತ್ತಿಗೆ ಮಠದ ಆರನೇ ವಾರ್ಷಿಕೋತ್ಸವವು ಶ್ರೀನಿವಾಸ ಕಲ್ಯಾಣ ಮಹೋತ್ಸವದ ಆಚರಣೆಯೊಂದಿಗೆ ವೈಭವದಿಂದ ಸಂಪನ್ನಗೊಂಡಿತು. ಸಾವಿರಾರು ಮಂದಿ ಭಕ್ತರು ಪಾಲ್ಗೊಂಡ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಪಾದರು ಆನ್ ಲೈನ್ ಮೂಲಕ ಹರಸಿದರು. ಇಲ್ಲಿ ಉಡುಪಿ ಶ್ರೀ ಕೃಷ್ಣನ ಮೂರ್ತಿಯನ್ನು ಶ್ರೀಪಾದರು ಇಲ್ಲಿ ಮುಖ್ಯಪ್ರಾಣ ಮತ್ತು ಗುರು ರಾಯರ ಮೃತ್ತಿಕಾ ಬೃಂದಾವನದ ಜೊತೆಗೆ ಸ್ಥಾಪಿಸಿರುವರು.

ವಾರ್ಷಿಕೋತ್ಸವ ದ ನಿಮಿತ್ತ ೧೦೮ ಕಲಶಾಭಿಷೇಕ , ಮಹಾಪೂಜೆ, ಶ್ರೀನಿವಾಸ ಕಲ್ಯಾಣ ಮಹೋತ್ಸವ ಮಹಾ ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗಪೂಜೆ, ಉತ್ಸವದ ಜೊತೆಗೆ ಪ್ರಧಾನ ಅರ್ಚಕ ಕುಕ್ಕೆಹಳ್ಳಿ ಶ್ರೀ ವಾದಿರಾಜ ಭಟ್ ನೇತೃತ್ವದಲ್ಲಿ ಅನೇಕ ಋತ್ವಿಜರ ಸಹಕಾರದೊಂದಿಗೆ ವೈಭವದಿಂದ ಸಂಪನ್ನಗೊಂಡಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles