Tuesday, July 1, 2025

spot_img

ತೆಲಂಗಾಣ :ನಿರ್ಮಾಪಕ ದಿಲ್‌ ರಾಜು ಮೇಲೆ ಐಟಿ ದಾಳಿ….!

ತೆಲಂಗಾಣ :

   ನಿರ್ಮಾಪಕ ದಿಲ್ ರಾಜು ಅವರು ಸದ್ಯ ಸೋಲಿನ ಸುಳಿಯಲ್ಲಿ ಇದ್ದಾರೆ. 450 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ ರಾಮ‘ಗೇಮ್ ಚೇಂಜರ್’ ಸಿನಿಮಾ ನಷ್ಟ ಅನುಭವಿಸುತ್ತಿರುವಾಗಲೇ ತೆರಿಗೆ ಇಲಾಖೆ ತಂಡದವರು ದಿಲ್ ರಾಜು ಮನೆ, ಕಚೇರಿ ಹಾಗೂ ಅವರ ಕುಟುಂಬದ ಮೇಲೆ ದಾಳಿ ನಡೆಸಿದೆ. ಈ ದಾಳಿ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ‘ಪುಷ್ಪ 2’ ನಿರ್ಮಾಪಕರ ಮನೆಯ ಮೇಲೂ ದಾಳಿ ಆಗಿದೆ.

   ಸಂಕ್ರಾಂತಿ ವೇಳೆ ದಿಲ್ ರಾಜು ನಿರ್ಮಾಣದ ‘ಗೇಮ್ ಚೇಂಜರ್’ ಹಾಗೂ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರಗಳು ರಿಲೀಸ್ ಆಗಿವೆ. ‘ಗೇಮ್ ಚೇಂಜರ್’ ಸೋಲನ್ನು ಉಣಿಸಿದರೆ, ‘ಸಂಕ್ರಾಂತಿಕಿ ವಸ್ತುನಾಮ್’ ಚಿತ್ರ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ.‘ಪುಷ್ಪ 2’ ಚಿತ್ರ ನಿರ್ಮಾಣ ಸಂಸ್ಥೆ ಮೇಲೂ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ನವೀನ್​, ಸಿಇಒ ಚರ್ರಿ ಕಚೇರಿ ಹಾಗೂ ಆಪ್ತರ ಕಚೇರಿಗಳಲ್ಲೂ ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಆಗಿದೆ. ವೆಂಕಟೇಶ್ವರ ಪ್ರೊಡಕ್ಷನ್ ಸಂಸ್ಥೆಯಲ್ಲೂ ಐಟಿ ತಂಡದವರು ದಾಖಲೆ ಪರಿಶೀಲನೆ ಮಾಡಿದ್ದಾರೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles