ಉಡುಪಿ: ಮನೆಯಂಗಳದಲ್ಲಿ ಕುಳಿತ ಮಹಿಳೆಯ ಕುತ್ತಿಗೆ ಕೈಹಾಕಿ ಚಿನ್ನದ ಸರ ಎಳೆದು ಪರಾರಿಯಾದ ಸರಗಳ್ಳನನ್ನು ಅಜೆಕಾರು ಪೊಲೀಸ್ ರು ಬಂಧಿಸುದ ಘಟನೆ ನಡೆದಿದೆ. ಸುನಿಲ್ ರಮೇಶ್ ಲಮಾಣಿ(29) ಬಂಧಿತ ಆರೋಪಿ.

ಕಾರ್ಕಳದ ಮುಳ್ಕಾಡು ಎಳ್ಳಾರೆ ಗ್ರಾಮದ ಕುಮುದಾ ಶೆಟ್ಟಿ ಅವರು ಮನೆಯ ಮುಂಭಾಗದಲ್ಲಿ ಕುಳಿತಿದ್ದಾಗ, ಅಪರಿಚಿತ ವ್ಯಕ್ತಿಯೋರ್ವ ಬಂದು ತಾನು ಕಾರ್ಕಳದ ಸೂಪರ್ ವೈಸರ್ ಎಂದು ಹೇಳಿ ಇಲ್ಲಿ ಹತ್ತಿರ ಮನೆ ಉಂಟಾ, ನಿಮ್ಮ ಮನೆಯಲ್ಲಿ ಸಿಸಿ ಕ್ಯಾಮರಾ ಉಂಟಾ ಎಂದು ವಿಚಾರಿಸಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಏಕಾಏಕಿ ಕುಮುದಾ ಅವರ ಕುತ್ತಿಗೆಗೆ ಕೈಹಾಕಿ ನೆಲಕ್ಕೆ ದೂಡಿ 25 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಆರೋಪಿ ತಳ್ಳಿದ ರಭಸಕ್ಕೆ ಕುಮುದಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸಿದ ಪೊಲೀಸ್ ರು, ಆರೋಪಿಯಿಂದ 1,75,000 ರೂಪಾಯಿ ಬೆಲೆಯ ಚಿನ್ನದ ರೋಪ್ ಚೈನ್ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.