ಕೋಟ : ಮಾಹಿತಿ ಮೇರೆ ಅಕ್ಕಿ ಗೋಡೌನ್ ಗೆ ಧಾಳಿ ಮಾಡಿದ ಪೊಲೀಸ್ ರಿಗೆ 8 ಕ್ವಿಂಟಾಲ್ ಗೂ ಅಧಿಕ ಅನ್ನಭಾಗ್ಯದ ಅಕ್ಕಿ ದಾಸ್ತಾನು ಪತ್ತೆಯಾದ ಘಟನೆ ಮೊಳಹಳ್ಳಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮೊಳಹಳ್ಳಿ ಮಾಸ್ತಿಕಟ್ಟೆ ಎಂಬಲ್ಲಿ ಗೋಡೌನ್ ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಮಾಡಿರುವ ಬಗ್ಗೆ ಪೊಲೀಸ್ ರಿಗೆ ಸ್ಥಳೀಯೋರ್ವರು ಮಾಹಿತಿ ನೀಡಿದ್ದಾರೆ.

ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿದಾಗ ಗೋಡೌನಲ್ಲಿ, ಬಿಳಿ ಪಾಲಿಥೀನ್ ಚೀಲದಲ್ಲಿ ಅಕ್ಕಿಯನ್ನು ತುಂಬಿದ್ದು ಕಂಡು ಬಂದಿದೆ. ಚೀಲದಲ್ಲಿ ಸರಕಾರದಿಂದ ನೀಡುವ ಉಚಿತ ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಇರಿಸಿರುವುದು ದೃಢಪಟ್ಟಿದೆ. ಒಟ್ಟು 8 ಕ್ವಿಂಟಾಲ್ 45 ಕೆ ಜಿ ಅಕ್ಕಿ ಮತ್ತು ತೂಕ ಮಾಡುವ ಮಾಪನ ಯಂತ್ರವನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.