ಉಡುಪಿ ; ಅತ್ಯಾಚಾರಕ್ಕೆ ಸಂತ್ರಸ್ತೆಯ ಹೆಣ್ಣುಮಗುವನ್ನು 4.5 ಲಕ್ಷ ರೂಪಾಯಿಗೆ ಮಾರಾಟದ ಮಾಡಿರುವ ಪ್ರಕರಣವೊಂದು ಕಾಪು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಡಾ. ಸೋಮೇಶ್ ಸೊಲೊಮನ್, ವಿಜಯಲಕ್ಷ್ಮೀ/ ವಿಜಯ, ಮಗು ಮಾರಾಟ ಪ್ರಕರಣದಲ್ಲಿ ಬಂಧಿತ ಆರೋಪಿಗಳು. ನವನೀತ್ ನಾರಾಯಣ ಅತ್ಯಾಚಾರ ಮಾಡಿದ ಆರೋಪಿ..
ಕಾಪು ತಾಲೂಕಿನ 92 ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ, ಗಂಡ ರಮೇಶ್ ಮೂಲ್ಯ ದಂಪತಿಗಳು ಹೆಣ್ಣು ಮಗುವೊಂದನ್ನು ಪೋಷಣ್ ಟ್ರ್ಯಾಕರ್ ನಲ್ಲಿ ರಿಜಿಸ್ಟರ್ ಮಾಡಲು ಅಂಗನವಾಡಿಗೆ ಕರೆದುಕೊಂಡು ಬಂದಿದ್ದರು. ಮಕ್ಕಳಿಲ್ಲದ ದಂಪತಿಗಳ ಕೈಯಲ್ಲಿ ನವಜಾತ ಹೆಣ್ಣು ಮಗುವನ್ನು ಅನುಮಾನಗೊಂಡ ಅಂಗನವಾಡಿ ಕಾರ್ಯಕರ್ತೆ ವಿಚಾರಿಸಿದಾಗ, ಹಣ ಕೊಟ್ಟು ಮಗು ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರಿನ ಕೊಲ್ಯಾಕೋ ಆಸ್ಪತ್ರೆಯಲ್ಲಿ ಅವಿವಾಹಿತೆಗೆ ಹುಟ್ಟಿದ ಮಗುವನ್ನು ಖರೀದಿಸಿರುವುದಾಗ ಅಂಗನವಾಡಿ ಕಾರ್ಯಕರ್ತೆಗೆ ಪೋಷಕರು ತಿಳಿಸಿದ್ದಾರೆ.

ಈ ಕುರಿತು ಶಿರ್ವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಮಗು ಖರೀದಿಸಿದ ಪ್ರಭಾವತಿ ಅವರ ಮನೆಗೆ ಹೋಗಿ ವಿಚಾರಿಸಿದಾಗ ಮಂಗಳೂರಿನ ಕೊಲ್ಯಾಕೋ ಆಸ್ಪತ್ರೆಯಿಂದ 4.5 ಲಕ್ಷ ಪಡೆದು ಮಗು ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನು ಹೆಣ್ಣು ಮಗುವಿನ ನಿಜವಾದ ತಾಯಿ, ಯುವಕನೋರ್ವನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು, ಹೀಗಾಗಿ ವಿಜಯ ಲಕ್ಷ್ಮೀ ಅವರು ಮಗು ಮಾರಾಟ ಮಾಡುವ ಉದ್ದೇಶಕ್ಕೆ ಮೊದಲೆ ಅತ್ಯಾಚಾರ ಸಂತ್ರಸ್ತೆಗೆ ಆಶ್ರಯ ನೀಡಿ, ಆಸ್ಪತ್ರೆಯ ದಾಖಲಾತಿಯಲ್ಲಿ ಪ್ರಭಾವತಿ ಅವರ ಹೆಸರು ದಾಖಲಿಸಿರುವುದು ಪತ್ತೆಯಾಗಿದೆ. ಸದ್ಯ ಅತ್ಯಾಚಾರ ಮಾಡಿರುವ ಆರೋಪಿ ನವನೀತ್ ನಾರಾಯಣ್ ಮೇಲು ಪ್ರಕರಣ ದಾಖಲಿಸಲಾಗಿದೆ. ಉಳಿದಂತೆ ಆರೋಪಿಗಳ ಮೇಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಮಗು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.