ಉಡುಪಿ : ಯಡಾಡಿ ಮತ್ಯಾಡಿ ಗ್ರಾಮ ಮನೆಯೊಂದರ ಗೊದ್ರೇಜ್ ನಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಕೋಟ ಪೊಲೀಸ್ ರು ಬಂಧಿಸಿದ್ದಾರೆ. ಆನಂದ(26) ಕಳ್ಳತನ ಆರೋಪದಡಿ ಬಂಧಿಸಲ್ಪಟ್ಟ ಆರೋಪಿ.

ಇದೇ ಸೆಪ್ಟೆಂಬರ್ 26ರ ರಾತ್ರಿ ಯಡಾಡಿ ಮತ್ಯಾಡಿ ಗ್ರಾಮದ ಬಸವ ಪೂಜಾರಿ ಅವರಿಗೆ ಸೇರಿದ ಮನೆಗೆ ನುಗ್ಗಿದ್ದ ಆರೋಪಿ 1,45,000 ರೂಪಾಯಿ ಬೆಲೆಯ 18 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ. ಈ ಕುರಿತು ಮನೆಯವರು ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಕೋಟ ಪೊಲೀಸ್ ರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಕಳವು ಮಾಡಿದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ.



