Thursday, March 5, 2026

spot_img

13 ವರ್ಷಗಳ ಹಿಂದೆ ಯುವಕ ನಾಪತ್ತೆ: ಬೆಂಗಳೂರುನಲ್ಲಿ ಪತ್ತೆ ಹಚ್ಚಿ ಮರಳಿ ಮನೆಗೆ ಸೇರಿಸಿದ ಪೊಲೀಸ್‌ ರು

ಉಡುಪಿ : ಸರಿಸುಮಾರು 13 ವರ್ಷಗಳ ಹಿಂದೆ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಗೆ ಹೋಗಿ ನಾಪತ್ತೆಯಾಗಿದ್ದ ಯುವಕನನ್ನು ಉಡುಪಿ ಪೊಲೀಸ್‌ ರು ಬೆಂಗಳೂರು ನಲ್ಲಿ ಪತ್ತೆ ಹಚ್ಚಿ, ಕುಟುಂಬದವರೊಂದಿಗೆ ಪುನರ್ಮಿಲನ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಭಾಕರ ಪ್ರಭು ಎಂಬವರ ಮಗ ಅನಂತ ಕೃಷ್ಣ ಪ್ರಭು(16) ಎಂಬಾತ 2012ರ ಡಿ.6ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೊದವನು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ತಂದೆ ಪ್ರಭಾಕರ ಪ್ರಭು ಅವರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸ್‌ ರು ವಿವಿಧ ಆಯಾಮಗಳನ್ನು ತನಿಖೆ ಮುಂದುವರಿಸಿ, ಸದ್ಯ ಬೆಂಗಳೂರು ನಲ್ಲಿ ಇಂಟಿರಿಯರ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದ ಅನಂತ ಕೃಷ್ಣ ಅವರನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಅನಂತ ಕೃಷ್ಣ ಅವರು ಕುಟುಂಬದವರ ಜೊತೆ ಮರಳಿ ಸೇರಿದ್ದಾರೆ.

 ಸುಮಾರು 13 ವರ್ಷಗಳಿಂದ ಪತ್ತೆಯಾಗದೇ ಇರುವ ಹಳೆ ಪ್ರಕರಣವನ್ನು ಡಿವೈಎಸ್‌ ಪಿ ಪ್ರಭು ಡಿ ಟಿ, ಬ್ರಹ್ಮಾವರ ಉಪನಿರೀಕ್ಷಕ ಸುದರ್ಶನ್ ದೊಡಮನಿ, ಉಡುಪಿ ನಗರ ಉಪ ನಿರೀಕ್ಷಕ ಈರಣ್ಣ ಶಿರಗುಂಪಿ, ಹೆಚ್ಸಿ ಇಮ್ರಾನ್, ಹೆಚ್ಸಿ ಚೇತನ್, ಪಿಸಿ ಸಂತೋಷ್ ದೇವಾಡಿಗ ಮತ್ತು ಪಿಸಿ ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಈತನನ್ನು ಪತ್ತೆ ಹಚ್ಚಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles