ಸಾಲಿಗ್ರಾಮ ಕೋಟ ಪರಿಸರದಲ್ಲಿ ಒಂದು ಶುಚಿ ಮತ್ತು ರುಚಿಯಾದ ಮಲ್ಟಿ ಕ್ಯುಸಿನ್ ಹೋಟೆಲ್ ಬೇಕು ಎನ್ನುತ್ತಿದ್ದ ಗ್ರಾಹಕರಿಗೆ “ತವಾ ಪಂಜಾಬ್” ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಹಾಗೆ ಆಗಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ೬೬ ಸಾಲಿಗ್ರಾಮ ಮಾರಿಯಮ್ಮನ ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂ ‘ತವಾ ಪಂಜಾಬ್’ ಹೆಸರಿನ ಮಲ್ಟಿ ಕ್ಯುಸಿನ್ ಹೋಟೆಲ್ ಸದ್ಯ ಗ್ರಾಹಕರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಇತ್ತಿಚೆಗಷ್ಟೆ ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ.ಕುಂದರ್ ಅವರ ಅಮೃತ ಹಸ್ತತದಿಂದ “ತವಾ ಪಂಜಾಬ್” ಹೊಟೇಲ್ ಲೋಕಾರ್ಪಣೆ ನಡೆಯಿತು. ಸಂಸ್ಥೆಯ ಮುಖ್ಯಸ್ಥ ವಿಜಯ ಶೆಟ್ಟಿ ಹವರಾಲು ಸಂಸ್ಥೆಯ ಕುರಿತು ಮಾತುಗಳನ್ನಾಡಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸೂರು, ಚಿತ್ರ ಸಾಹಿತ್ಯ ಪ್ರಮೋದ್ ಮರವಂತೆ, ಬಿಗ್‌ಬಾಸ್ ರನ್ನರ್ ಅಪ್ ತ್ರಿವಿಕ್ರಮ್, ಝೀ ಕನ್ನಡ ಮಹಾನಟಿಯ ಗಗನ್, ಚಿತ್ರನಟ ಕವೀಶ್ ಶೆಟ್ಟಿ, ನಟಿ ಪ್ರತಿಮಾ ನಾಯ್ಕ, ಉದ್ಯಮಿ ವೆಂಕಟೇಶ್, ಕಟ್ಟಡ ಮಾಲಕ ಅಯ್ಯಪ್ಪ, ರೋಟರಿ ಕೋಟ-ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ಮೊದಲಾದವರಿದ್ದರು. ನವೀನ್ ಶೆಟ್ಟಿ ಆಲ್ತಾರು ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಬರುವ ಬಹುತೇಕ ಪ್ರವಾಸಿಗರಿಗೆ ಮಣಿಪಾಲ ಸೆಳೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಮಣಿಪಾಲಕ್ಕೆ ಬರುವ ಪ್ರತಿಯೋರ್ವರಿಗೂ ಕೂಡ ಮಣಿಪಾಲ ಕಾಯಿನ್ ಸರ್ಕಲ್ ಬಳಿ ಇರುವ ತವಾ ಪಂಜಾಬ್ ಅಚ್ಚುಮೆಚ್ಚಿನ ತಾಣ. ಕಳೆದ ಹಲವು ವರ್ಷಗಳಿಂದ ಮಣಿಪಾಲದಲ್ಲಿ ಗ್ರಾಹಕರಗೆ ಉತ್ತಮ ಗುಣಮಟ್ಟದ ಆಹಾರ ಖಾದ್ಯಗಳನ್ನು ನೀಡುತ್ತಾ ಬಂದಿರುವ ತವಾ ಪಂಜಾಬ್ ಸಂಸ್ಥೆಯ ಮತ್ತೊಂದು ಶಾಖೆಗೆ ಸಾಲಿಗ್ರಾಮದಲ್ಲಿ ಇತ್ತೀಚೆಗೆ ಉದ್ಘಾಟನೆ ಗೊಂಡ “ತವಾ ಪಂಜಾಬ್”. ಶುಚಿ ಮತ್ತು ರುಚಿಯ ಜೊತೆಗೆ ಕುಟುಂಬ ಸಮೇತರಾಗಿ ಬಂದು ನೆಮ್ಮದಿ ನೆರಳಿನಲ್ಲಿ ಆಹಾರ ಸವಿಯುವಂತೆ ಮಾಡುತ್ತಿದೆ ತವಾ ಪಂಜಾಬ್. ಸದ್ಯ ತವಾ ಪಂಜಾಬ್ ಸಂಸ್ಥೆ ಮಾಂಸಾಹಾರಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಗಳಿಸಿದ್ದು ರಾಜ್ಯದ ನಾಲ್ಕು ಶಾಖೆಗಳನ್ನು ಹೊಂದಿದೆ.

ಇನ್ನು ಸಂಸ್ಥೆಯ ಉದ್ಘಾಟನೆಗೆ ಬಿಗ್ ಬಾಸ್ ಖ್ಯಾತಿ ತ್ರಿವಿಕ್ರಮ, ಸಂಗೀತ ನಿರ್ದೇಶಕ ರವಿ ಬಸೂರು, ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಝೀ ಕನ್ನಡ ಮಹಾನಟಿಯ ಗಗನ್, ಚಿತ್ರನಟ ಕವೀಶ್ ಶೆಟ್ಟಿ, ಕಾಂತಾರ ಖ್ಯಾತಿಯ ಪ್ರತಿಮಾ ನಾಯ್ಕ ಮತ್ತಿತರರು ಆಗಮಿಸಿದ ಹಿನ್ನಲೆಯಲ್ಲಿ “ತವಾ ಪಂಜಾಬ್” ಸಾಲಿಗ್ರಾಮ ಪರಿಸರದ ಹೊಸ ಲ್ಯಾಂಡ್ ಮಾರ್ಕ್ ಆಗಿ ಹೊರ ಹೊಮ್ಮಿದೆ. ಕೇವಲ ಹೆಸರಿಗಷ್ಟೆ ಅಲ್ಲದೇ ರುಚಿಯಾದ ಆಹಾರಗಳ ಮೂಲಕ ದಿನ ದಿನೇ ಗ್ರಾಹಕರನ್ನು ಸೆಳೆಯುತ್ತಿದೆ. ವಿಶಾಲವಾದ ಪಾರ್ಕೀಂಗ್ ವ್ಯವಸ್ಥೆ ಜೊತೆಗೆ ಉತ್ತಮ ಆಂಬಿಯನ್ಸ್ ಇರುವ “ತವಾ ಪಂಜಾಬ್ ” ಪರಿಸರ ಗ್ರಾಹಕರ ಮನ ಸೂರೆಗೊಳ್ಳುತ್ತಿದೆ.

ಇನ್ನು ಸಮಾಜ ಮುಖಿ ಕಾರ್ಯದಲ್ಲಿ ತವಾ ಪಂಜಾಬ್ ಮಾಲಕ ವಿಜಯ ಶೆಟ್ಟಿ ಹವರಾಲು ಸದಾ ಮುಂದೆ ಇದ್ದು, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಮಣಿಪಾಲದ ಹೋಟೆಲ್ ಬಂದ್ ಮಾಡಿ ನೌಕರರನ್ನು ಬೀದಿ ಹಾಕುವ ಬದಲು, ನೌಕರರಿಗೆ ಸಂಬಳ ನೀಡಿ ಅವರ ಜೊತೆಗೆ ನಿಂತವರು. ಜಿಲ್ಲಾಢಳಿತ ಅನುಮತಿ ಪಡೆದು ಅಡುಗೆ ತಯಾರಿಸಿ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳಿಗೆ, ಇನ್ನಿರತ ಅಗತ್ಯತೆ ಇರುವ ಕಡೆಗೆ ಉಚಿತ ಊಟ ಸರಬರಾಜು ಮಾಡುವ ಕೆಲಸ ಮಾಡಿರುವುದು, ಅವರ ಸಮಾಜಮುಖಿ ಚಿಂತನೆ ಹಿಡಿದ ಕೈಗನ್ನಡಿ. ಹೀಗಾಗಿ ತವಾ ಪಂಜಾಬ್ ಕೇವಲ ಉತ್ತಮ ಊಟ ಖಾದ್ಯ ನೀಡದೆ ಸಮಾಜಕ್ಕೆ ಉತ್ತಮ ಸಂದೇಶ ಜೊತೆಗೆ ಸೇವೆ ನೀಡುತ್ತಿದೆ ಎನ್ನಬಹುದು.

ದಿನವು ತವಾ ಪಂಜಾಬ್ ಹೋಟೆಲ್ ನಲ್ಲಿ ಗ್ರಾಹಕರು ಬಂದು ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಈ ಭಾಗದಲ್ಲಿ ಇರುವವರು, ಒಮ್ಮೆ ತವಾ ಪಂಜಾಬ್ ನಲ್ಲಿ ಹೋಗಿ ರುಚಿ ಸವಿಯಬೇಕು ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಹೀಗೇ ಹೆಸರು ಕೀರ್ತಿಯ ಜೊತೆಗೆ ಹಸಿದು ಬಂದವರಿಗೆ ಅನ್ನ ನೀಡುವ ಕಾರ್ಯ ನಿಮ್ಮಿಂದ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ.

ಒಂದ್ ಸಲಾ ತವಾ ಪಂಜಾಬ್ ಹೋಯಿ ಉಂಡ್ ಕಂಡ್ ಬನಿ ಅಕಾ
