ಉಡುಪಿ : ಹೋಟೆಲ್ ಉದ್ಯಮಿ ಓರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆತ್ರಾಡಿಯಲ್ಲಿ ನಡೆದಿದೆ. ಹೋಟೆಲ್ ಉದ್ಯಮಿ ಬೈಲೂರಿನ ಕೃಷ್ಣರಾಜ ಹೆಗ್ಡೆ (45) ಶರಣಾದವರು. ಇಂದು ಆತ್ರಾಡಿಯ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಮೃತ ಕೃಷ್ಣರಾಜ ಹೆಗ್ಡೆ ಪತ್ನಿ,ಪುತ್ರ, ತಾಯಿ ಹಾಗೂ ಸಹೋದರಿಯನ್ನ ಅಗಲಿದ್ದಾರೆ.
ಮಣಿಪಾಲದಲ್ಲಿ ಹೋಟೆಲ್ ಉದ್ಯಮ ನಡೆಸಿಕೊಂಡಿದ್ದ ಕೃಷ್ಣರಾಜ ಹೆಗ್ಡೆ ಅವರು ಬೈಲೂರು ಕೌಡೂರು ಮಾರಿಯಮ್ಮ ದೇವಸ್ಥಾನದ ನಾಯರ್ಬೆಟ್ಟು ಧಾರ್ಮಿಕ ಸೇವಾ ಸಮಿತಿಯ ಕಾರ್ಯದರ್ಶಿಯಾಗಿದ್ದರು. ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಕೃಷ್ಣರಾಜ ಹೆಗ್ಡೆಯವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಉದ್ಯಮಿಯಾಗಿದ್ದರು.


