ಕೋಟ : ಸಾಲಿಗ್ರಾಮದ ಹೊಸಬದುಕು ಆಶ್ರಮದ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ಅಗತ್ಯವಿದ್ದ ಇನ್ವರ್ಟರ್ ಅನ್ನು ರೋಟರಿ ಕ್ಲಬ್ ಕೋಟ, ಸಾಲಿಗ್ರಾಮ ವತಿಯಿಂದ ದೇಣಿಗೆಯಾಗಿ ಒದಗಿಸಲಾಯಿತು.

ರೋಟರಿ ಕ್ಲಬ್ ಸದಸ್ಯರಾದ ಭಸವ ಪೂಜಾರಿ ಪಾರಂಪಳ್ಳಿ ಅವರು ಇನ್ವರ್ಟರ್ ನೀಡಿದ್ದು, ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಯೋಗೀಶ್ ಕುಮಾರ್, ಕಾರ್ಯದರ್ಶಿ ಶರಣಯ್ಯ ಹೀರೆಮಠ, ಸಮಾಜ ಸೇವಕರಾದ ಮಾಧವ ಪೂಜಾರಿ ಪಾರಂಪಳ್ಳಿ, ಕಿರಣ ಗಾಣಿಗ ಹಾಗೂ ಪ್ರಸಾದ್ ಭಂಡಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇನ್ವರ್ಟರ್ ಅನ್ನು ಹೊಸಬದುಕು ಆಶ್ರಮದ ಸಂಸ್ಥಾಪಕಿ ರಾಜಶ್ರೀ ವಿನಯಚಂದ್ರ ಅವರಿಗೆ ಹಸ್ತಾಂತರಿಸಲಾಯಿತು. ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲಿಯೂ ಆಶ್ರಮದ ಸೇವೆಗಳು ನಿರಂತರವಾಗಿ ಸಾಗಲು ಈ ನೆರವು ಉಪಯುಕ್ತವಾಗಲಿದೆ ಎಂದು ಆಶ್ರಮದವರು ಅಭಿಪ್ರಾಯ ವ್ಯಕ್ತಪಡಿಸಿದರು.



