Sunday, March 1, 2026

spot_img

ಹೊಸಂಗಡಿ ಭಾಗಿಮನೆ ಬಳಿ ಟ್ರೆಕ್ಕಿಂಗ್ ವೇಳೆ ಮಹಿಳೆ ನದಿಯಲ್ಲಿ ಮುಳುಗಿ ಸಾವು

ಉಡುಪಿ : ಹೊಸಂಗಡಿಯ ಭಾಗಿಮನೆ ಸಮೀಪ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಭಾನುವಾರ ಸಂಭವಿಸಿದೆ. ಕುಂದಾಪುರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶುಭಶ್ರೀ ಕಾರಂತ್ (53) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಕುಂದಾಪುರದಿಂದ 8–10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರೆಕ್ಕಿಂಗ್‌ಗೆ ತೆರಳಿತ್ತು. ಈ ವೇಳೆ ನದಿಗೆ ಇಳಿದಿದ್ದ ಶುಭಶ್ರೀ ಕಾರಂತ್ ಅವರು ಏಕಾಏಕಿ ಮುಳುಗಿಹೋದರು ಎನ್ನಲಾಗಿದೆ. ಜೊತೆಗಿದ್ದವರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆಹಾಕುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles