ಹೆಬ್ರಿ: ಹೆಬ್ರಿ ಕಳ್ತೂರು ಸಂತೆಕಟ್ಟೆಯಲ್ಲಿರುವ ಸಿರಿ ಮುಡಿ ಹೋಟೇಲಿನಲ್ಲಿ ನಡೆದ ಮಾರಣಾಂತಿಕ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿದೂರು ದಾಖಲಾದ ಬೆನ್ನಲ್ಲೆ ರೌಡಿಶೀಟರ್ ಗಳ ಬಂಧನವಾಗಿದೆ. ಕಳ್ತೂರು ನಿನಾಸಿ ಶ್ರೀಕಾಂತ ಕುಲಾಲ್ (29) ಕೆಂಜೂರು ಸಂತೋಷ ನಾಯ್ಕ (43) ಕಳ್ತೂರು ಸದಾನಂದ ಪೂಜಾರಿ (46) ಮತ್ತು ರಾಜೇಶ್ ನಾಯ್ಕ (30) ಆರೋಪಿಗಳು. ಜುಲೈ 20ರಂದು ಕಳ್ತೂರು ಸಂತೆಕಟ್ಟೆಯಲ್ಲಿರುವ ಸಿರಿ ಮುಡಿ ಹೋಟೇಲಿನಲ್ಲಿ ಮದ್ಯಾಹ್ನ 2:15 ಗಂಟೆಗೆ ರೌಡಿ ಶೀಟರ್ ಗಳಾದ ಶ್ರೀಕಾಂತ್ ಕುಲಾಲ್ ಮತ್ತು ಸದಾನಂದ ಪೂಜಾರಿ, ಸಂತೋಷ ನಾಯ್ಕ ಮತ್ತು ಇನ್ನೊರ್ವ ರೌಡಿ ರಾಜೇಶ ನಾಯ್ಕ ಎನ್ನುವವರ ನಡುವೆ ವಾಗ್ವಾದ ನಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು, ಹೊಡದಾಟ ನಡೆಸಿದ್ದಾರೆ. ಬಳಿಕ ರಾಜೇಶ್ ನಾಯ್ಕ್ ಅಜ್ಜರಕಾಡುವಿನಲ್ಲಿರುವ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದು, ಉಳಿದ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ., ಇದರ ಪ್ರತಿ ದೂರು ಎನ್ನುವಂತೆ ರಾಜೇಶ್ ನಾಯ್ಕ ರವರು ಸಂತೋಷ ನಾಯ್ಕ ರವರಿಗೆ ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣದ ಹಿನ್ನಲೆಯಲ್ಲಿ ಹೆಬ್ರಿ ಪೊಲೀಸ್ ರು ಆರೋಪಿಗಳನ್ನು ಬಂಧಿಸಿ, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.