ಹೆಬ್ರಿ: ವೇಗವಾಗಿ ಬಂದ ಕಾರು ಗುರು ಕೃಪಾ ಕಾಂಪೌಂಡ್ ಗೆ ಗುದ್ದಿದ ಘಟನೆ ಹೆಬ್ರಿ- ಉಡುಪಿ ರಾಷ್ಟ್ರೀಯ ಹೆದ್ದಾರಿ ಎಸ್.ಆರ್. ಸ್ಕೂಲ್ ಬಳಿ ನಡೆದಿದೆ. ಅಪಘಾತದ ತೀವ್ರತೆಗೆ ಕಾರು ಪಲ್ಟಿಯಾಗಿದ್ದು, ಕಾಂಪೌಂಡ್ ದ್ವಂಸಗೊಂಡಿದೆ. ಆದರೆ ಅದೃಷ್ಟಾವಶಾತ್ ಎನ್ನುವಂತೆ ಕಾರಿನ ಚಾಲಕ ಪ್ರಾಣಾಯಾಪದಿಂದ ಪಾರಾಗಿದ್ದಾರೆ.

ಅಪಘಾತ ನಡೆಯುವ ಸಂದರ್ಭ ಹತ್ತಿರದಲ್ಲಿ ಶಾಲೆಯ ತರಗತಿಗಳು ನಡೆಯುತ್ತಿದ್ದು, ಒಂದೆ ವೇಳೆ ಶಾಲೆ ಬಿಡುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದರೆ, ಭಾರಿ ಅನಾಹುತವಾಗುತ್ತಿತ್ತು. ಈ ಮೊದಲು ರಸ್ತೆ ಅಗಲ ಕಿರಿದಾಗಿತ್ತು ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದವು, ಆದರೆ ಈಗ ರಸ್ತೆ ಅಗಲೀಕರಣವಾದ ಬಳಿಕ ವಾಹನ ಸವಾರ ಶರವೇಗದಲ್ಲಿ ವಾಹನ ಚಲಾಯಿಸುವ ಹಿನ್ನಲೆಯಲ್ಲಿ ಅಪಘಾತಗಳು ಹೆಚ್ಚುತ್ತಿದೆ ಎನ್ನುತ್ತಿದ್ದಾರೆ ಸ್ಥಳಿಯರು.


