Thursday, October 23, 2025

spot_img

ಹಿರಿಯ ಪತ್ರಕರ್ತ ಹಾರ್ಯಾಾಡಿ ಮಂಜುನಾಥ ಭಟ್ ಇನ್ನಿಿಲ್ಲ

ಉಡುಪಿ: ‘ಉದಯವಾಣಿ’ ಸಹಿತ ವಿವಿಧ ಪತ್ರಿಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸಾಹಿತ್ಯ, ಸಂಸ್ಕೃತಿ ಒಲವಿನ ಹಿರಿಯ ಪತ್ರಕರ್ತ ಹಾರ್ಯಾಾಡಿ ಮಂಜುನಾಥ ಭಟ್ (72) ಅವರು ಅಸೌಖ್ಯದಿಂದ ಆ. 17ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಮೃತರು ಪತ್ನಿಿ, ಪುತ್ರ, ಪುತ್ರಿಿಯನ್ನು ಅಗಲಿದ್ದಾಾರೆ. ಕುಂದಾಪುರ ತಾಲೂಕಿನ ಗುಡ್ಡಟ್ಟು ಸಮೀಪದ ಹೆಸ್ಕತ್ತೂರು ಗ್ರಾಾಮದ ಹಾರ್ಯಾಾಡಿಯ ಎಚ್. ಲಕ್ಷ್ಮೀನಾರಾಯಣ ಭಟ್ ಮತ್ತು ಗಂಗಮ್ಮ ದಂಪತಿಯ ಪುತ್ರನಾದ ಭಟ್ ಅವರು, ಹೆಸ್ಕತ್ತೂರು, ಕುಂಜಾಲು, ಸಾಯ್ಬರಕಟ್ಟೆೆ, ಉಡುಪಿ ಸಂಸ್ಕೃತ ಕಾಲೇಜಿನ ಪ್ರೌೌಢಶಾಲೆ, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ.ಪೂ.ಶಿಕ್ಷಣ, ಸ್ವಲ್ಪ ಸಮಯ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ, ಬಳಿಕ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ, ಕುಂಜಿಬೆಟ್ಟು ಶಿಕ್ಷಣ ಮಹಾವಿದ್ಯಾಾಲಯದಲ್ಲಿ ಬಿಎಡ್ ಪದವಿ ಪಡೆದು ಬೆಂಗಳೂರಿನ ನ್ಯಾಾಶನಲ್ ಪ್ರೌೌಢಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ದಿನಗಳಿಂದಲೂ ವಾಸವಿರುತ್ತಿಿದ್ದ ಪೇಜಾವರ ಮಠವನ್ನು ಕೇಂದ್ರೀಕರಿಸಿಕೊಂಡು ಸಾಹಿತ್ಯ, ಸಂಸ್ಕೃತಿಯ ಕುರಿತಾದ ಆ ಕಾಲದ ವಿದ್ಯಾಾರ್ಥಿ ಚರ್ಚಾಗುಂಪಿನಲ್ಲಿ ಆಸಕ್ತಿಿಯಿಂದ ತೊಡಗಿಸಿಕೊಳ್ಳುತ್ತಿಿದ್ದ ಭಟ್ ಅವರು ಶಿಕ್ಷಕ ವೃತ್ತಿಿಯನ್ನು ಬಿಟ್ಟು ಚಿಂತನಶೀಲತೆ, ಜನಜಾಗೃತಿಗೆ ಸದಾ ತೆರೆದುಕೊಳ್ಳುವ ಪತ್ರಿಿಕಾರಂಗಕ್ಕೆೆ ಮಂಗಳೂರಿನ ನವಭಾರತದ ಮೂಲಕ 1977ರಲ್ಲಿ ಕಾಲಿಟ್ಟರು. ಬಳಿಕ ಮುಂಗಾರು ಪತ್ರಿಿಕೆಯ ಆರಂಭದಿಂದ ಕೊನೆಯವರೆಗೂ ಇದ್ದರು (1985-96). ಮುಂಗಾರಿನಲ್ಲಿ ಸುದ್ದಿ ಸಂಪಾದಕರಾಗಿದ್ದ ಭಟ್, ಬಳಿಕ ಒಂದು ವರ್ಷ ಕನ್ನಡ ಜನ ಅಂತರಂಗದಲ್ಲಿದ್ದು ಮುಂದೆ ‘ಉದಯವಾಣಿ’ಯ ಮಂಗಳೂರು ವರದಿಗಾರರಾಗಿ 1998ರಿಂದ ಕಾರ್ಯನಿರ್ವಹಿಸಿದರು. ಉದಯವಾಣಿಯ ಮಣಿಪಾಲ ಕೇಂದ್ರ ಕಚೇರಿಯ ಸಂಪಾದಕೀಯ ವಿಭಾಗದಲ್ಲಿಯೂ ಇದ್ದು, 2009ರಲ್ಲಿ ಸೇವಾನಿವೃತ್ತಿಿ ಹೊಂದಿದ್ದರು.
ಚಿಂತಕ, ವಿಮರ್ಶಕ
ಮಂಗಳೂರು, ಮಣಿಪಾಲ ಕಚೇರಿಯಲ್ಲಿರುವಾಗ ವಿಶೇಷವಾಗಿ ಸಾಹಿತ್ಯ ಚಟುವಟಿಕೆಯ ವರದಿಗಾರಿಕೆ, ಅಪರಾಧ ಸುದ್ದಿ ಪುಟವನ್ನು ನೋಡಿಕೊಳ್ಳುತ್ತಿಿದ್ದರು. ಈಶ್ವರಯ್ಯನವರ ಸಹಕಾರದಿಂದ ‘ಕಲಾವಿಹಾರ’ ವಿಭಾಗಕ್ಕೆೆ ಸಂಗೀತಾದಿ ಕಲಾ ಕಾರ್ಯಕ್ರಮಗಳ ವಿಮರ್ಶೆ, ವಿಶ್ಲೇಷಣೆಗಳನ್ನು ಕಲಾರಸಿಕರಾದ ಭಟ್ ಅವರು ಬರೆದು ಹೊಸ ಚೈತನ್ಯ ತುಂಬಿದರು. ಭಟ್ ಅವರ ಕಾಲದಲ್ಲಿ ಕಂಪ್ಯೂೂಟರ್ ಪದ್ಧತಿ ಇಲ್ಲವಾಗಿದ್ದರೂ ‘ಉದಯವಾಣಿ’ಯಲ್ಲಿದ್ದ ಕೊನೆಯ ದಿನಗಳಲ್ಲಿ ಒಂದು ನಿರ್ದಿಷ್ಟ ಹಂತದವರೆಗೆ ಕಂಪ್ಯೂೂಟರ್ ಕಲಿತು, ‘ಇಷ್ಟು ಸುಲಭದಲ್ಲಿದ್ದರೆ ಮೊದಲೇ ಕಲಿತುಬಿಡುತ್ತಿಿದ್ದೆೆ’ ಎಂದು ಹಾಸ್ಯಚಟಾಕಿ ಹಾರಿಸುತ್ತಿಿದ್ದರು. 2009ರಲ್ಲಿ ಮಗನ ಜತೆ ವಾಸಿಸಲು ಬೆಂಗಳೂರಿಗೆ ಸ್ಥಳಾಂತರಗೊಂಡರು. ಈ ಸಂದರ್ಭ ರಾಷ್ಟ್ರೋೋತ್ಥಾಾನ ಸಾಹಿತ್ಯ ಮತ್ತು ಉತ್ಥಾಾನ ಮಾಸಪತ್ರಿಿಕೆಯ ಸಂಪಾದಕೀಯ ವಿಭಾಗದಲ್ಲಿ ಇತ್ತೀಚಿನವರೆಗೂ ಸಕ್ರಿಿಯವಾಗಿ ಕಾರ್ಯನಿರ್ವಹಿಸುತ್ತಿಿದ್ದರು. ಕಲಾಕ್ಷೇತ್ರಕ್ಕೆೆ ಸಲ್ಲಿಸಿದ ಕೊಡುಗೆಯನ್ನು ಗಮನಿಸಿ ಹಿರಿಯ ವಿಮರ್ಶಕ ಎ.ಈಶ್ವರಯ್ಯನವರ ಸ್ಮರಣೆಯಲ್ಲಿ ಮಂಜುನಾಥ ಭಟ್ ಅವರಿಗೆ ‘ಸರಸಸಾರಗ್ರಹಣನಿರೂಪಣನಿಪುಣ’ ಎಂಬ ಉಪಾಧಿಯ ಗೌರವವನ್ನೂ ಪ್ರದಾನ ಮಾಡಲಾಗಿತ್ತು.
ಯಥಾವತ್ ವರದಿಯಲ್ಲಿ ಸಿದ್ಧಹಸ್ತ
ಸಾಹಿತ್ಯ, ಮಹಿಳಾ ಸಂವೇದನೆ, ವಿಮರ್ಶೆ ವಿಶ್ಲೇಷಣೆ, ಪರಿಸರ ಇತ್ಯಾಾದಿ ವಿಷಯಗಳಲ್ಲಿ ಸುದೀರ್ಘ ವರದಿ, ಲೇಖನಗಳನ್ನು ಸಿದ್ಧಪಡಿಸುವಲ್ಲಿ ಸಿದ್ಧಹಸ್ತರಾಗಿದ್ದ ಭಟ್, ಯಾವತ್ತೂ ಪತ್ರಿಿಕಾ ರಂಗವನ್ನು ಜನಪ್ರಿಿಯತೆಗೆ ಬಳಸಿಕೊಂಡವರಲ್ಲ. ಹೀಗಾಗಿ ಅವರು ಸಮಾಜದ ಮುಂಚೂಣಿ ಪತ್ರಕರ್ತರಾಗಿಯೂ ಕಾಣಿಸಿಕೊಳ್ಳಲಿಲ್ಲ. ಅವರ ಸ್ಮರಣಶಕ್ತಿಿ ಅತ್ಯದ್ಭುತವಾಗಿತ್ತು. ಎಷ್ಟೇ ಸುದೀರ್ಘ ಭಾಷಣವಿದ್ದರೂ ಚಾಚೂ ತಪ್ಪದೆ ವರದಿಯನ್ನು ಮಾಡುತ್ತಿಿದ್ದುದು ವಿಶೇಷವಾಗಿತ್ತು. ಹೀಗಾಗಿ ಅವರು ಸಾಮಾನ್ಯವಾಗಿ ಉದ್ಘಾಾಟನ ಸಮಾರಂಭದಲ್ಲಿ ಕಾಣಿಸಿಕೊಳ್ಳದೆ ಅನಂತರದ ಗೋಷ್ಠಿಿಗಳಲ್ಲಿ ಎಲ್ಲೋೋ ಮರೆಯಲ್ಲಿ ನಿಂತು ಮಾಹಿತಿ ಸಂಗ್ರಹಿಸುವುದು ಅವರದೇ ಆದ ವಿಶಿಷ್ಟ ಶೈಲಿಯಾಗಿತ್ತು. ಸಾಹಿತ್ಯ, ಸಂಸ್ಕೃತಿಯ ಜತೆ ಹೇಗೆ ಒಲವು ಇತ್ತೋೋ ಅಷ್ಟೇ ಒಲವು ಅದಕ್ಕೆೆ ವಿರುದ್ಧವಾದ ಅಪರಾಧ ಸುದ್ದಿಗೂ ಇತ್ತು. ಅಪರಾಧ ಸುದ್ದಿಯಲ್ಲಿಯೂ ಹಲವು ಆಯಾಮಗಳನ್ನು ಕೆದಕಿ ಕೆದಕಿ ಕೇಳಿ ಅದನ್ನು ಒಟ್ಟಂದದಲ್ಲಿ ಪ್ರಕಟವಾಗುವಂತೆ ನೋಡುವ ಜಾಣ್ಮೆೆ ಭಟ್ ಅವರಲ್ಲಿತ್ತು. ಇದೇ ವೇಳೆ ವ್ಯಕ್ತಿಿಚಿತ್ರಗಳ ಬರವಣಿಗೆಯಲ್ಲಿಯೂ ಸೈ ಎನಿಸಿಕೊಂಡಿದ್ದರು. 1980-90ರ ದಶಕಗಳಲ್ಲಿ ಕಾಣಿಸಿಕೊಂಡ ಬೃಹತ್ ಉದ್ದಿಮೆಗಳ ಹಾವಳಿ ಸಂದರ್ಭ ನೂರಾರು ಪರಿಸರ ಜಾಗೃತಿ ಲೇಖನ, ವರದಿಗಳನ್ನು ಸಕಾಲಿಕವಾಗಿ ಬರೆದ ಹಿರಿಮೆ ಭಟ್ ಅವರಿಗೆ ಇದೆ. ಇದೇ ರೀತಿ ಮಹಿಳಾ ಸಂವೇದನೆ ಕುರಿತು, ಶೋಷಣೆ ವಿರುದ್ಧವೂ ಬರವಣಿಗೆ ಮೂಲಕ ಜಾಗೃತಿ ಮೂಡಿಸಿದ್ದರು. 
ಮಂಜುನಾಥ ಭಟ್ಟರ ತಾಯಿ ಮತ್ತು ಅತ್ತೆೆಯವರ (ಗಂಗಾಬಾಗೀರಥೀ) ಹೆಸರಿನಲ್ಲಿ ಪುತ್ರ ಅರವಿಂದ ಅವರು ಕೋಟೇಶ್ವರದ ವಿದ್ಯಾಾಪೋಷಕ್ ವಿದ್ಯಾಾರ್ಥಿಗೆ ಕಟ್ಟಿಿಸಿಕೊಟ್ಟ ಮನೆಯ ಉದ್ಘಾಾಟನೆಗೆ ಭಟ್ ಇದೇ ಎಪ್ರಿಿಲ್‌ನಲ್ಲಿ ಬಂದು ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದರು. ಅನಂತರ ಅವರು ಆನಾರೋಗ್ಯದ ಕಾರಣದಿಂದ ಊರಿಗೆ ಬಂದಿರಲಿಲ್ಲ. ಆ. 17ರಂದು ರಾತ್ರಿಿ ಹುಟ್ಟೂರು ಹಾರ್ಯಾಾಡಿಯಲ್ಲಿ ಭಟ್ ಅವರ ಅಂತಿಮ ಸಂಸ್ಕಾಾರ ನೆರವೇರಿತು.
ಕೃತಿಕಾರರೂ ಆಗಿದ್ದರು
ಮಂಜುನಾಥ ಭಟ್ ಅವರು ವರದಿಗಾರಿಕೆಯಷ್ಟೇ ಕೃತಿ ರಚನೆಯಲ್ಲಿಯೂ ತೊಡಗಿಕೊಂಡಿದ್ದರು. ಒಬ್ಬ ಉತ್ತಮ ಓದುಗಾರರಾಗಿದ್ದ ಭಟ್ ಅವರು ಸಾವಿರಾರು ಪುಸ್ತಕಗಳನ್ನು ಖರೀದಿಸಿ ಓದಿ ತಮ್ಮ ಜ್ಞಾನವನ್ನು ಹೆಚ್ಚಿಿಸಿಕೊಳ್ಳುತ್ತಿಿದ್ದರು. ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಾಧ್ಯಾಾಪಕ ಪ್ರೊೊ ಬಿ.ವಿ. ಆಚಾರ್ಯರ ಕುರಿತಾದ ಸಂಪಾದಿತ ಕೃತಿ ‘ಸೇವಾಸಿಂಧು’, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಾಧ್ಯಾಾಪಕ ಪ್ರೊೊ ಉದ್ಯಾಾವರ ಮಾಧವಾಚಾರ್ಯರ ‘ಲಗು-ಬಿಗು ಪ್ರಬಂಧಗಳು- ಶ್ರೀಪದ’, ಸೀತಾರಾಮ ಗೋಯಲ್ ಅವರ ‘ಮುಸ್ಲಿಿಂ ಪ್ರತ್ಯೇಕತಾವಾದ’, ‘ಭಾರತದ ಸೆಕ್ಯುಲರಿಸಂ’, ‘ಇಸ್ಲಾಾಂ ಆಕ್ರಾಾಂತ- ಹಿಂದೂ ದೇವಾಲಯಗಳು’ ಮೊದಲಾದ ಇಂಗ್ಲಿಿಷ್‌ನಿಂದ ಕನ್ನಡಕ್ಕೆೆ ಅನುವಾದಿತ ಕೃತಿಗಳು, ತುರ್ತು ಪರಿಸ್ಥಿಿತಿ ಕುರಿತಾದ ಕೃತಿ ಹೀಗೆ ಅನೇಕ ಕೃತಿಗಳನ್ನು ಅವರು ಹೊರತಂದಿದ್ದರೂ ಲೋಕದೆದುರು ಎಲೆಮರೆಯ ಕಾಯಿಯಂತೆ ಬದುಕು ಸಾಗಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles