ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 48 ದಿನಗಳ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ರಾಜಾಂಗಣದ ಶ್ರೀ ಮಧು ತೀರ್ಥ ವೇದಿಕೆ ಯಲ್ಲಿ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ಡಾ.ಮುದ್ದು ಮೋಹನ್ ರವರಿಂದ ಭಕ್ತಿ ಸಂಗೀತ /ದಾಸವಾಣಿ ಗಾಯನಗಳನ್ನು ಮಧುರ ಕಂಠದಿಂದ ಹಾಡಿದರು. ಸಂಗೀತ ಪ್ರೀಯರು ನಾದಾಲೋಕದಲ್ಲಿ ಮಿಂದೆದ್ದರು.

ತನು ನಿನ್ನದೇ, ಹರಿಕಥಾ ಶ್ರಾವಣ, ಮಾಧವ, ಶುಕ್ಲಾಂಬರದರಂ, ವಾತಾಪಿ ಗಣಪತಿ ಹೀಗೆ ಅನೇಕ ಗಾಯನಗಳಿಂದ ಸುಮಾರು ಒಂದೂವರೆ ಗಂಟೆಗಳಿಗೂ ಕಾಲ ಹೆಚ್ಚು ತಮ್ಮ ಹಿಂದೂಸ್ಥಾನಿ ಗಾಯನದಿಂದ ಪ್ರೇಕ್ಷಕರ ಮನಗೆದ್ದರು.

ಹಾಡಿನ ಕೊನೆಯಲ್ಲಿ ಪ್ರತಿ ಬಾರಿಯೂ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿದರು.ಅವರ ಗಾಯನಕ್ಕೆ ತಕ್ಕಂತೆ ವಾದ್ಯ ಸಹಾಯಕರಾದ ತಬಲದಲ್ಲಿ ಪಂ.ರಾಜಗೋಪಾಲ್ ಕಲ್ಲೂರ್ಕರ್, ಹಾರ್ಮೋನಿಯಂ ನಲ್ಲಿ ಪ್ರಸಾದ್ ಕಾಮತ್ ಹಾಗೂ ವಯಲಿನ್ ನಲ್ಲಿ ಪಂ. ರಂಗ ಪೈ ಸಾಥ್ ನೀಡಿದರು.
