Saturday, June 28, 2025

spot_img

ಹಿಂದೂಗಳ ಮೇಲೆ ಏಕಿಷ್ಟು ಆಘಾತ ? ಆಕ್ರೋಶವೇ ಅಥವಾ ಹೆದರಿಕೆಯೇ ? : ಚಕ್ರವರ್ತಿ ಸೂಲಿಬೆಲೆ

ಬಂಟ್ವಾಳ: ಪರಿಶುದ್ಧ ಗಂಗೆ ಸ್ವರೂಪ ಹಿಂದೂ ಧರ್ಮ, ಈ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ಹೋಳಿ ಇರಲಿ, ದೀಪಾವಳಿ ಇರಲಿ ಹಿಂದೂಗಳಲ್ಲಿ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ. ಹಿಂದೂಗಳ ಆಚರಣೆಯ ಬಗ್ಗೆ ಪ್ರಸಾರ ಮಾಧ್ಯಮಗಳ ಮುಖಾಂತರ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳ ಮೇಲೆ ಆರೋಪಗಳನ್ನು ಮಾಡಲಾಗುತ್ತದೆ. ಹಿಂದೂ ಸಮಾಜ ಜಾಗೃತವಾದರೆ ಇತರ ಪಂಥೀಯರು ಏನೂ ಮಾಡಲು ಸಾಧ್ಯವಿಲ್ಲ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸ್ಪರ್ಶಾ ಕಲಾ ಮಂದಿರ,  ಬಿ. ಸಿ. ರೋಡ್,  ಬಂಟ್ವಾಳದಲ್ಲಿ ಪ್ರಾಂತೀಯ  ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡಿ ಸಂತರ ಮೇಲೆ  ಆರೋಪಗಳನ್ನು  ಹಾಕಲಾಗುತ್ತದೆ, ಆಕ್ರಮಣಗಳನ್ನು ಮಾಡಲಾಗುತ್ತದೆ. ಎಡಪಂಥೀಯರು ಕ್ರಿಟಿಕಲ್ ರೇಸ್ ಥಿಯರಿ ಮುಖಾಂತರ ಹಿಂದೂಗಳನ್ನು ಜಾತಿ ಮತ ಪಂಥಗಳ ಹೆಸರಿನಲ್ಲಿ ವಿಭಜನೆಯನ್ನು ಮಾಡಲಾಗುತ್ತಿದೆ. ಅಮೇರಿಕಾದಿಂದ ಪ್ರಾಯೋಜಿತ ಮತಾಂತರ ಹಾಗೂ ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ‌ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರವೆಂದರೆ ನಮ್ಮ ಧರ್ಮ ರಕ್ಷಣೆ ನಮ್ಮದೇ ಕರ್ತವ್ಯವಾಗಿದೆ ಎಂಬ ಅರಿವು ನಮ್ಮಲ್ಲಿ ನಿರ್ಮಾಣವಾಗಬೇಕು. ಧರ್ಮ ರಕ್ಷಣೆಗಾಗಿ ಸರ್ವಸ್ವದ ತ್ಯಾಗ ಮಾಡಲು ನಾವು ಸಿದ್ಧರಾಗಿರಬೇಕು ಎಂದು ಉಪಸ್ಥಿತ ಹಿಂದೂ ಬಾಂಧವರಿಗೆ ಚಕ್ರವರ್ತಿ ಸೂಲಿಬೆಲೆ ಇವರು ಕರೆ ನೀಡಿದರು.

ಹಿಂದೂ ರಾಷ್ಟ್ರ ಅಧಿವೇಶನವನ್ನು ಶಂಖನಾದ ಮತ್ತು ವೇದಮಂತ್ರ ಪಠಣದೊಂದಿಗೆ ಪ್ರಾರಂಭಿಸಲಾಯಿತು.  ಅಧಿವೇಶನದ ಉದ್ಘಾಟನೆಯನ್ನು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿಂದುತ್ವನಿಷ್ಠ ವಕೀಲರಾದ ನ್ಯಾ. ಕೃಷ್ಣಮೂರ್ತಿ, ಉದ್ಯಮಿಗಳಾದ ಎಂ. ಜೆ. ಶೆಟ್ಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ್ ಗೌಡ ಇವರ ದಿವ್ಯ ಹಸ್ತಗಳಿಂದ ದೀಪ ಪ್ರಜ್ವಲನೆಯನ್ನು ಮಾಡಿ ಅಧಿವೇಶನದ ಉದ್ಘಾಟನೆಯನ್ನು ಮಾಡಿದರು. ಅಧಿವೇಶನದಲ್ಲಿ ಹಿಂದೂ ರಾಷ್ಟ್ರ ಆಕ್ಷೇಪ ಮತ್ತು ಖಂಡನೆ,  ಹಬ್ಬಗಳನ್ನು  ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ ಈ ೨ ಗ್ರಂಥಗಳ ಇ-ಬುಕ್ ನ ಉದ್ಘಾಟನೆಯನ್ನು ಗಣ್ಯರ  ಹಸ್ತದಿಂದ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles