ಉಡುಪಿ: ಆರೋಪಿಯೋರ್ವ ಮಹಿಳಾ ಪೊಲೀಸ್ ಠಾಣೆಯ ವಾಶ್ ರೂಮ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಕ್ಷಿತ್ ಶೆಟ್ಟಿ (22) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ.

ಉಡುಪಿ ನಗರ ಮಹಿಳಾ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ೨ನೇ ಆರೋಪಿಯಾಗಿದ್ದ ರಕ್ಷಿತ್ ಎನ್ನುವಾತನನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ-೧ ಉಡುಪಿ ದಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಈ ವೇಳೆ ತನಗೆ ವಾಶ್ ರೂಮ್ ಗೆ ಹೋಗಬೇಕು ಎಂದು ಪೊಲೀಸ್ ಸಿಬ್ಬಂದಿಗಳ ಬಳಿ ಕೇಳಿಕೊಂಡಿದ್ದ ಆರೋಪಿಗೆ ಪೊಲೀಸ್ ರು ಅನುವು ಮಾಡಿಕೊಟ್ಟಿದ್ದರು. ಇದೇ ಸಂದರ್ಭ ಪೊಲೀಸ್ ರ ಕಣ್ಣು ತಪ್ಪಿಸಿ, ಪ್ರಕರಣ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವಾಶ್ ರೂಮ್‌ನಲ್ಲಿದ್ದ ಹಾರ್ಪಿಕ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ಉಡುಪಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.