Wednesday, March 4, 2026

spot_img

ಹಳೆ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ 9.63 ಕೋಟಿಗೂ ಅಧಿಕ ವಂಚನೆ..!?

ಉಡುಪಿ : ಅಲ್ಯೂಮಿನಿಯಂ, ತಾಮ್ರ ಸೇರಿದಂತೆ ಹಳೆಯ ಲೋಹ ಸಾಮಗ್ರಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡು ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕೇರಳ ಮೂಲದ ಮೂವರು ನಿರ್ದೇಶಕರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಲ್ಕೇರಿಯಾ ಗ್ಲೋಬಲ್ ಸ್ಟಾರ್ಸ್ ಇಂಡ್ ಮೆಟಲ್ ಪ್ರೈವೇಟು ಲಿಮಿಟೆಡ್‌ನ ನಿರ್ದೇಶಕ ಸುನೀಲ್ ಕುಮಾರ್ ದೂರು ನೀಡಿದ್ದಾರೆ.

 2014ರ ಆಗಸ್ಟ್ 1ರಂದು, ಗ್ಲೋಬಲ್ ಸ್ಟಾರ್ಸ್ ಕಂಪನಿಯು ಕೇರಳದ ಕಾಂಞಕಾಡಿನ ಅಣ್ಣಾಮ್ ಸ್ಟೀಲ್ಸ್ ಪ್ರೈ. ಲಿಮಿಟೆಡ್‌ನ ನಿರ್ದೇಶಕರಾದ ಫಿರೋಜ್ ಇ.ಟಿ., ಕಲಾಯತ್ ನೂರ್ ಮಹಮ್ಮದ್ ನೂರೀಸ್, ಚಿಲೈಯ್ ವಿಜಯ್ ಕುಮಾರ್, ಇವರೊಂದಿಗೆ 11.50 ಕೋಟಿ ರೂಪಾಯಿ ಮೌಲ್ಯದ ಅಲ್ಯೂಮಿನಿಯಂ ಮತ್ತು ತಾಮ್ರದ ಸಾಮಗ್ರಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.

ಆದರೆ, ಆರೋಪಿತರು ಒದಗಿಸಬೇಕಿದ್ದ ಸಾಮಗ್ರಿಗಳಲ್ಲಿ ಕೇವಲ 3.38 ಕೋಟಿ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಮಾತ್ರ ಪೂರೈಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಸಾಮಗ್ರಿ ನೀಡದ ಕಾರಣ, ಉಳಿದ ಮೊತ್ತ ಹಾಗೂ ಬಡ್ಡಿಯನ್ನು ಸೇರಿ ಒಟ್ಟು 9,63,83,000 ರೂಪಾಯಿ ವಾಪಾಸ್ ನೀಡುವುದಾಗಿ ಹೇಳಿ ಆರೋಪಿತರು ಚೆಕ್ ನೀಡಿದ್ದರು. ಆದರೆ, ಖಾತೆಯಲ್ಲಿ ಹಣವಿಲ್ಲದ ಕಾರಣ ಆ ಚೆಕ್‌ ಅಮಾನ್ಯಗೊಂಡಿದೆ. ಈ ಹಿನ್ನಲೆಯಲ್ಲಿ ಹಳೆ ಸಾಮಗ್ರಿ ಪೂರೈಸುವುದಾಗಿ ನಂಬಿಸಿ ಅಪಾರ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ದೂರುದಾರರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles