ಬೆಂಗಳೂರು : ಮಾರ್ಚ್ 30 ಯುಗಾದಿ ಹಬ್ಬವಿದೆ. ಯುಗಾದಿಯ ಮರುದಿನ ಹೊಸತೊಡಕು ಆಚರಣೆ ಮಾಡಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಕರ್ನಾಟಕದ ಬಹುತಾಂಶ ಜಿಲ್ಲೆಗಳಲ್ಲಿ ಮಾಂಸಹಾರ ಭೋಜನ ಮಾಡುವ ಪದ್ದತಿ ಇದೆ. ಈ ಸಮಯದಲ್ಲಿ ಹಿಂದೂ ಬಾಂಧವರು ಹಲಾಲ್ ಮಾಂಸದ ಬದಲು, ಹಿಂದೂ ಪದ್ದತಿಯ ಜಟ್ಕಾ ಮಾಂಸ ಖರೀಧಿ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಇವರು ಕರೆ ನೀಡಿದರು.
ಅವರು ಬೆಂಗಳೂರಿನ ವಿಜಯನಗರದ ವಿವೇಕ ಪಾರ್ಕ್ ನಲ್ಲಿ ನಡೆದ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಯುಗಾದಿಯ ಮರುದಿನ ಮೈಲಾರ, ಕಾಲಭೈರವ, ಹುಲಿಯರಾಯ, ಬೀರಪ್ಪ ಜಾತರ, ಕುಲದೇವರುಗಳಿಗೆ ಮಾಂಸಹಾರ ಭೋಜನ ನೈವೇದ್ಯ ಮಾಡುವ ಪದ್ದತಿ ಇದೆ. ಹಲಾಲ್ ಮಾಂಸದಲ್ಲಿ ಮುಸಲ್ಮಾನರು ಪ್ರಾಣಿಬಲಿ ಮಾಡುವಾಗ ಅವರು ಕುರಾನ್ ಕಲ್ಮಾಗಳನ್ನು ಹೇಳಿ, ಪ್ರಾಣಿಯನ್ನು ಮೆಕ್ಕಾ ದಿಕ್ಕಿಗೆ ಮುಖ ಮಾಡಿ, ಅಲ್ಲಹಾನಿಗೆ ಅರ್ಪಣೆ ಮಾಡುತ್ತಾರೆ. ಅದನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಹಾಗಾಗಿ ಹಿಂದೂ ಸಮಾಜವು ಜಟ್ಕಾ ಮಾಂಸವನ್ನು ಬಳಸಬೇಕೆಂದು ಕರೆ ನೀಡುತ್ತೇವೆ. ಸರ್ಕಾರವು ಹಿಂದೂಗಳ ಈ ಅಗತ್ಯತೆಯನ್ನು ಗಮನದಲ್ಲಿರಿಸಿ ರಾಜ್ಯದ ಎಲ್ಲ ಕಡೆ ಜಟ್ಕಾ ಮಾಂಸವನ್ನು ಉಪಲಬ್ದವಾಗುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು ಎಂದರು.
ರಾಜ್ಯದಲ್ಲಿ ಹಲಾಲ್ ಪ್ರಮಾಣಪತ್ರದ ಮೇಲೆ ನಿಷೇಧ ಹೇರಿ ! – ಹಿಂದೂ ಜನಜಾಗೃತಿ ಸಮಿತಿ
ಹಲಾಲ್ ಪ್ರಮಾಣಪತ್ರದ ಮೂಲಕ ದೇಶದ ೪ ಲಕ್ಷ ಕೋಟಿ ಮಾಂಸದ ವ್ಯಾಪಾರದ ಮೇಲೆ ಒಂದೇ ಸಮುದಾಯದ ಏಕಸ್ವಾಮ್ಯವಿದೆ. ಇದರಿಂದ ವಂಶಪಾರಂಪರ್ಯವಾಗಿ ಮಾಂಸದ ವ್ಯಾಪಾರ ಮಾಡುತ್ತಿದ್ದ ಮಾದಿಗ, ಚಮ್ಮಾರ್, ಕುರುಬ, ಯಾದವ, ಮುಂತಾದ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳ ವ್ಯಾಪಾರದ ಮೇಲೆ ಗಂಬೀರ ಪರಿಣಾಮವಾಗಿದೆ. ಇದು ಅವರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕೆನ್ನುವ ಸಂವಿದಾನದ ಕಲಂ ೪೬ ರ ಉಲ್ಲಂಘನೆಯಾಗಿದೆ. ಹಲಾಲ್ ಪ್ರಮಾಣ ಪತ್ರದ ಮೂಲಕ ಭಾರತದ ಅರ್ಥವ್ಯವಸ್ಥೆಗೆ ಸಮಾನಾಂತರವಾಗಿ ಪ್ರತ್ಯೇಕ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಪ್ರಯತ್ನವನ್ನು ಜಮಿಯತ್ ಉಲೇಮ್ ಹಿಂದ್ ನಂತಹ ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಮಾಡುತ್ತಿವೆ. ದೇಶದಲ್ಲಿ ಆಹಾರದ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಕೇಂದ್ರ ಸರಕಾರದ ಅಧಿಕೃತ ಸಂಸ್ಥೆಗಳಾದ ಎಫ್.ಎಸ್.ಎಸ್.ಎ.ಐ & ಎಫ್‌ಡಿಎ ಯಂತಹ ಸಂಸ್ಥೆಗಳು ಇರುವಾಗ, ಧರ್ಮದ ಆಧಾರದ ಮೇಲೆ ಹಲಾಲ್ ಪ್ರಮಾಣಪತ್ರವನ್ನು ನೀಡುವುದು ಸಂವಿಧಾನಬಾಹಿರವಾಗಿದೆ. ಈ ಮೂಲಕ ಜಮಿಯತ್ ಉಲೇಮಾ ಹಿಂದ್ ನೂರಾರು ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುತ್ತಿದೆ. ಇದು ಎಫ್.ಎಸ್.ಎಸ್.ಎ.ಐ ನಿಯಮಕ್ಕೆ ವಿರುದ್ಧವಾಗಿದೆ. ಈ ಹಣವು ಅನೇಕ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇದನ್ನು ಗಮನದಲ್ಲಿರಿಸಿ ಉತ್ತರ ಪ್ರದೇಶ ಸರಕಾರವು ಹಲಾಲ್ ಪ್ರಮಾಣಪತ್ರ, ಹಲಾಲ್ ಉತ್ಪನ್ನದ ಮೇಲೆ ನಿಷೇಧ ಹೇರಿದೆ. ಹಾಗಾಗಿ ಕರ್ನಾಟಕದಲ್ಲಿ ಸಹ ಹಲಾಲ್ ಪ್ರಮಾಣಪತ್ರವನ್ನು ಕೂಡಲೇ ನಿಷೇಧ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಹಿಂದೂ ಮುಖಂಡರಾದ ಎಂ. ಎಲ್. ಶಿವಕುಮಾರ್, ಹಿಂದವೀ ಜಟ್ಕಾ ಮೀಟ್‌ನ ಮಾಲೀಕರಾದ ಮುನೆ ಗೌಡ, ಅಖಿಲ ಭಾರತೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಡಾ. ಬಿ ಎನ್. ಮಹೇಶ್ ಕುಮಾರ್, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಉಪಸ್ಥಿತರಿದ್ದರು