ಉಡುಪಿ : ಹರಿಯಾಣ ಯಮುನಾ ನಗರದಿಂದ ನಾಪತ್ತೆಯಾಗಿದ್ದ ಯುವಕನೋರ್ವನನ್ನು ಉಡುಪಿ ಜಿಲ್ಲೆಯ ತ್ರಾಸಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಶಿವಮ್(22) ಹರಿಯಾಣ ಮೂಲದ ತ್ರಾಸಿಯಲ್ಲಿ ಪತ್ತೆಯಾದವರು. ಶಿವಮ್ ಇತ್ತೀಚೆಗೆ ಮನೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಯುವಕ ಶಿವಮ್ ರೈಲು ಹತ್ತಿದ್ದ, ಈತ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ತ್ರಾಸಿ ಮೂಲದ ಯುವಕರ ತಂಡವೂ ಪ್ರಯಾಣ ಬೆಳೆಸಿತ್ತು. ಇದೇ ಯುವಕರು ಶಿವಂ ಚಹರೆ ಬಗ್ಗೆ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿವಮ್ ತ್ರಾಸಿಯಲ್ಲಿದ್ದ ಬಗ್ಗೆ ಖಚಿತ ವರ್ತಮಾನ ಪಡೆದು ಗಂಗೊಳ್ಳಿ ಠಾಣೆ ಪಿಎಸ್ಐ ಪವನ್ ನಾಯಕ್ ಮತ್ತು ಸಿಬ್ಬಂದಿಗಳು ಯುವಕನನ್ನು ವಿಚಾರಿಸಿ ಬಳಿಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಗಂಗೊಳ್ಳಿ ಪೊಲೀಸರ ಜೊತೆ ಮಾತನಾಡಿ ಮಾಹಿತಿ ಪಡೆದ ಶಿವಂ ಪೋಷಕರು ಹರಿಯಾಣ ರಾಜ್ಯದಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಗಂಗೊಳ್ಳಿ ಠಾಣೆಗೆ ಬಂದು ಮಗನನ್ನು ಕರೆದೊಯ್ದಿದ್ದಾರೆ.