ಉಡುಪಿ : ಜ್ಯುವೆಲ್ಲರಿ ಅಂಗಡಿಯಿಂದ ಗಿಫ್ಟ್ ಕೊಡಲು ಚಿನ್ನದ ಉಂಗುರು ಬೇಕು ಎಂದು 2 ಚಿನ್ನದ ಉಂಗುರ ಖರೀದಿ ಮಾಡಿ ಹಣ ನೀಡದೆ ಮೋಸ ಮಾಡಿದ ವ್ಯಕ್ತಿಯನ್ನು ಅಮಾಸೆಬೈಲು ಪೊಲೀಸ್ ರು ಬಂಧಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೋಷ ಎನ್ನುವಾತನನ್ನು ಪೊಲೀಸ್‌ರು ಬಂಧಿಸಿದ್ದಾರೆ.

2024 ನವೆಂಬರ್ ನಲ್ಲಿ ಹೊಸಂಗಡಿ ಗ್ರಾಮದ ಸಿ.ಎ. ಬ್ಯಾಂಕಿನ ಕಟ್ಟಡದಲ್ಲಿರುವ ಮಂಜುನಾಥ ಗೊಲ್ಲ ಮಾಲಕತ್ವದ ಶ್ರೀಕೃಷ್ಣ ಜ್ಯೂವೆಲರಿ ಬಂದಿದ್ದ ಸಂತೋಷ್ ಎಂದು ಪರಿಚಯಿಸಿಕೊಂಡು ಬಂದಿದ್ದ ಆರೋಪಿ 30 ಸಾವಿರ ಮೌಲ್ಯದ 2 ಚಿನ್ನದ ಉಂಗುರು ಖರೀದಿಸಿ ಬ್ಯಾಂಕ್ ಮೂಲಕ ನೆಫ್ಟ್ ಮಾಡುವುದಾಗಿ ತಿಳಿಸಿ ಮೊಬೈಲ್ ತೋರಿಸಿ ಉಂಗುರ ತೆಗೆದುಕೊಂಡು ತೆರಳಿದ್ದ. ಆದರೆ ಆರೋಪಿಯ ಬ್ಯಾಂಕ್ ಖಾತೆಯಿಂದ ಯಾವುದೇ ಹಣ ಇದುವರೆಗೂ ಜ್ಯುವೆಲ್ಲರಿ ಅಂಗಡಿ ಮಾಲಕರ ಖಾತೆ ಹಣ ಬಾರದ ಹಿನ್ನಲೆಯಲ್ಲಿ ವಿಚಾರಿಸಿದಾಗ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾನೆ.

ಬಳಿಕ ಆತನ ಪೂರ್ವಪರ ವಿಚಾರಿಸಿದಾಗ ಸಂತೋಷ್ ಎಂದು ನಕಲಿ ಹೆಸರು ಹೇಳಿರುವುದು ತಿಳಿದು ಬಂದ ಹಿನ್ನಲೆಯಲ್ಲಿ ಅನುಮಾನಗೊಂಡು ಜ್ಯುವೆಲ್ಲರಿ ಅಂಗಡಿ ಮಾಲಕ ಮಂಜುನಾಥ ಗೊಲ್ಲ ಅಮಾಸೆಬೈಲು ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ.

ಈ ಕುರಿತು ತನಿಖೆ ಮಾಡಿದ ಪೊಲೀಸ್ ರು ಆರೋಪಿ ಪ್ರವೀಣ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ಸಂಬಂಧಿಸಿದ ಚಿನ್ನ ಮತ್ತು ಕಾರು ಇನ್ನಿತರ ವಸ್ತುಗಳನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.
