Wednesday, October 22, 2025

spot_img

ಹಟ್ಟಿಯಂಗಡಿ ಮೇಳದ ಯಕ್ಷ ಪಂಚಮಿ: ಆಜ್ರಿ ಗೋಪಾಲ ಗಾಣಿಗರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಯಕ್ಷಪ್ರಶಸ್ತಿ

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ- ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದಂಗಳ ಆಶೀರ್ವಾದದೊಂದಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ರಿ. ಉಡುಪಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲೆ, ದ್ಯುತಿಪರ್ವ ಯಕ್ಷಪ್ರಸ್ಟ್ ರಿ. ಕುಂದಾಪುರ ಇವರ ಸಹಕಾರದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿ ಅಂಗಡಿ ಇವರಿಂದ ಪ್ರತಿ ವರ್ಷ ನಡೆಯುವ ಯಕ್ಷಪಂಚಮಿ ಕಾರ್ಯಕ್ರಮ ಈ ವರ್ಷ ಅಕ್ಟೋಬರ್ 20 ರಿಂದ 25ರ ವರೆಗೆ ಪ್ರತಿದಿನ ಸಂಜೆ 7:00ಗೆ ಸರಿಯಾಗಿ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. 

 ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ ಇವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಯಕ್ಷಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಕಾರ್ಯಕ್ರಮದಲ್ಲಿ ಮನೋಹರ್ ಶೆಟ್ಟಿ ರಾಧಾ ಮೆಡಿಕಲ್ ಉಡುಪಿ, ಕೆ ದಿನೇಶ್ ಹೆಗಡೆ ಉಪ ಸಂಚಾಲಕರು ಬಂಟರೆಯಾನೆ ನಾಡವರ ಸಂಘ ಉಡುಪಿ, ರಂಜನ್ ಕಲ್ಕೂರ ಕಲ್ಕೂರ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಉಡುಪಿ, ದಿನೇಶ್ ಪೈ ಅಧ್ಯಕ್ಷರು ರಂಗಸ್ಥಳ ರಿ.ಮಂಗಳೂರು, ಡಾ. ರವೀಂದ್ರ ಶೆಟ್ಟಿ ಗಿರಿಜಾ ಹೆಲ್ತ್ ಕೇರ್ ಸರ್ಜಿಕಲ್ ಉಡುಪಿ, ಎಸ್ ಎಲ್ ನಾಯಕ್ ಟ್ಯಾಕ್ಸ್ ಕಂಸಲ್ಟೆಂಟ್ ಮಂಗಳೂರು, ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷರು ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ, ಗೋಪಾಲ್ ಸಿ ಬಂಗೇರ ಅಧ್ಯಕ್ಷರು ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ, ನಿತ್ಯಾನಂದ ನಾಯಕ್ ಪರ್ಕಳ ಸಿಇಒ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ, ರಘುನಾಥ್ ನಾಯಕ್ ನಿ.ರೈಲ್ವೆ ಅಧಿಕಾರಿ, ಚಂದ್ರಶೇಖರ್ ಶೆಟ್ಟಿ ಶಿರಿಯಾರ ಉದ್ಯಮಿಗಳು, ಮುರಳಿ ಶೆಟ್ಟಿ ಸಮಾಜ ಸೇವಕರು ಹಾಗೂ ಅನೇಕ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ಹಟ್ಟಿ ಅಂಗಡಿ ಮೇಳದ ಹಿರಿಯ ಕಲಾವಿದರಾದ  ಹಳ್ಳಾಡಿ ಜಯರಾಮ್ ಶೆಟ್ಟಿ, ನರಸಿಂಹ ಗಾಂವಕರ, ಶಿಥಿಲ ಶೆಟ್ಟಿ, ಶ್ರೀಕಾಂತ ರಟ್ಟಾಡಿ, ಶರತ್ ಶೆಟ್ಟಿ, ಪ್ರದೀಪ ನಾಯ್ಕ, ಪ್ರಭಾಕರ ಹೆಗಡೆ, ರಾಜಾರಾಂ ಹೆಗಡೆ, ಮಂಜುನಾಥ ನಾವಡ, ನವೀನ ಕೋಡಿ ಹಾಗೂ ಹವ್ಯಾಸಿ ರಂಗದ ರಘುನಾಥ್ ನಾಯಕ್, ಕುಮಾರ ಮಾಸ್ತರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತ್ರತ್ವದ ತಲ್ಲೂರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಹಾಗು ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ನೇತ್ರತ್ವದ ಹಟ್ಟಿ ಅಂಗಡಿ ಮೇಳ ಮತ್ತು ದ್ಯುತಿ ಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಇವರ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles