Thursday, March 5, 2026

spot_img

ಹಂದಿ ಹಿಡಿಯಲು ಹಾಕಲಾಗಿದ್ದ ಉರುಳಿಗೆ ಸಿಲುಕಿದ ಚಿರತೆ, ಮರಳಿ ಕಾಡಿಗೆ…

ಉಡುಪಿ: ಹೆಬ್ರಿ ಸಮೀಪದ ಮುದ್ರಾಡಿ ಗ್ರಾಮದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿ ಸೆರೆಯಾದ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಹಂದಿ ಹಿಡಿಯಲು ಹಾಕಲಾಗಿದ್ದ ಉರುಳಿಗೆ ಚಿರತೆ ಸಿಲುಕಿಕೊಂಡು ತೀವ್ರವಾಗಿ ಒದ್ದಾಡುತ್ತಿದ್ದ ದೃಶ್ಯ ಸ್ಥಳೀಯರು ಗಮನಿಸಿದ್ದಾರೆ. ಗಾಯಗೊಂಡ ಚಿರತೆಯ ಅರವಳಿಕೆಯಿಂದ ಸ್ಥಳೀಯರು ಭಯಗೊಂಡು ಸಮೀಪಕ್ಕೆ ಹೋಗದೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರು ಅರವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಡಾ. ಮೇಘನಾ, ಡಾ. ಯಶಸ್ವಿನಿ ಹಾಗೂ ಉಚ್ಚು ಟ್ರಸ್ಟ್‌ನ ಅಕ್ಷಯ್ ಶೇಟ್ ಸಹಕರಿಸಿದ್ದಾರೆ. ರಕ್ಷಿಸಲ್ಪಟ್ಟ ಚಿರತೆಯನ್ನು ಚಿಕಿತ್ಸೆ ನೀಡಿ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles