ಉಡುಪಿ : ಉಡುಪಿ ತಾಲ್ಲೂಕು ಮಂಚಿ ಕುಮೇರಿ ಯಲ್ಲಿ ಬಹಳಷ್ಟು ಜನಸಂಖ್ಯೆ ಇರುವ ಪ್ರದೇಶ, ಈ ಭಾಗದಿಂದ ನಿತ್ಯ ಉದ್ಯೋಗಕ್ಕಾಗಿ ತೆರಳುವವರು, ಶಾಲಾ ವಿದ್ಯಾರ್ಥಿಗಳು ಬಸ್ ಸ್ಟಾಂಡ್ ಇಲ್ಲದೇ ಮಳೆ ಬಿಸಿಲಿನಲ್ಲಿ ಸಂಕಷ್ಟ ಪಡುವ ಪರಿಸ್ಥಿತಿ ಇತ್ತು. ಇಲ್ಲಿ ಸಮಸ್ಯೆಯನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಣಿಪಾಲ ವಲಯ ಮಹತ್ಕಾರ್ಯ ಒಂದನ್ನು ಮಾಡಿದೆ. ಬಸ್ ಸ್ಟಾಂಡ್ ಇಲ್ಲದೆ ಬಿಸಿಲು ಮಳೆಗೇ ಜನರಿಗೆ ಸಮಸ್ಯೆ ಆಗುತ್ತಿದ್ದು ಇದನ್ನು ಗಮನಿಸಿದ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸದಸ್ಯರು ಊರಿನವರ ಸಹಕಾರದೊಂದಿಗೆ ಮತ್ತು ಶೌರ್ಯ ಘಟಕದ ಹರೀಶ್ ರವರು ಆರ್ಥಿಕ ಸಹಕಾರದೊಂದಿಗೆ ನೂತನ ಬಸ್ ಸ್ಟಾಂಡ್ ನಿರ್ಮಿಸಿದ್ದಾರೆ.

ಸ್ಥಳೀಯರಾದ ಈಶ್ವರ್ ರವರು ನೂತನ ಸ್ವಾಮಿ ವಿವೇಕಾನಂದ ಬಸ್ ತಂಗುದಾಣ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಅಶೋಕ್ ನಾಯ್ಕ್, ಜನಜಾಗೃತಿ ವೇದಿಕೆ ಸದಸ್ಯ ಕುಶಾಲ್ ಶೆಟ್ಟಿ, ಜನಜಾಗೃತಿ ಯೋಜನಾಧಿಕಾರಿ ಗಣೇಶ್, ಶೌರ್ಯ ವಿಪತ್ತು ಘಟಕ ಮಣಿಪಾಲ ವಲಯದ ಎಲ್ಲಾ ಸ್ವಯಂಸೇವಕರು, ಊರಿನ ಗಣ್ಯರು, ಹಾಗೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದು. ಕಾರ್ಯಕ್ರಮದ ನಿರ್ವಹಣೆ ಯನ್ನು ವಲಯ ಮೇಲ್ವಿಚಾರಕಾರದ ಬಾಲಚಂದ್ರ ನಿರ್ವಹಿಸಿದರು. ಸೇವಾಪ್ರತಿನಿಧಿ ಚಂದ್ರಕಲಾ ಉಪಸ್ಥಿತರಿದ್ದರು.
