Monday, March 2, 2026

spot_img

ಸ್ವಚ್ಛತಾ ಹೀ ಸೇವಾ ಘೋಷಣೆಯಡಿ ಉಡುಪಿಯಲ್ಲಿ ಸ್ವಚ್ಛ ಭಾರತ್ ಶ್ರಮದಾನ

ಉಡುಪಿ : ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿಮಿಟೆಡ್ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಘೋಷಣೆಯಡಿ ಸ್ವಚ್ಛ ಭಾರತ್ – 6ನೇ ಶ್ರಮದಾನ ಕಾರ್ಯಕ್ರಮ ಭಾನುವಾರ ಉಡುಪಿಯ ಅಂಜುಮಾನ್ ರಸ್ತೆ ಹಾಗೂ ಸಿಟಿ ಬಸ್ ನಿಲ್ದಾಣ ಪ್ರದೇಶದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮಕ್ಕೆ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ, ಗುರು ಸೇವಾ ಪರಿಷತ್ ಉಡುಪಿ ಮಹಾಮಂಡಲದ ಅಧ್ಯಕ್ಷ ಸುಧಾಕರ ಆಚಾರ್ಯ, ಹಾಗೂ ಉಡುಪಿ ಜಿಲ್ಲಾ ಕಾರ್ಪೆಂಟರ್ಸ್ ಯೂನಿಯನ್ (ರಿ.) ಕಾರ್ಯದರ್ಶಿ ಜಯಕರ ಆಚಾರ್ಯ ಚಾಲನೆ ನೀಡಿದರು. 

ಬ್ಯಾಂಕಿನ ನಿರ್ದೇಶಕರಾದ ಜಗದೀಶ್ ಜೆ. ಆಚಾರ್ಯ, ಬಿಜು ಜಯ ಆಚಾರ್ಯ, ಹರಿಪ್ರಸಾದ್ ಆಚಾರ್ಯ, ಉಡುಪಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ, ಹಾಗೂ ಮಾಜಿ ಸೈನಿಕ ಕೇಶವ ಆಚಾರ್ಯ ದೊಡ್ನಗುಡ್ಡೆ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಗುರು ಸೇವಾ ಪರಿಷತ್ ಉಡುಪಿ ಮಹಾಮಂಡಲದ ಪ್ರಮುಖರಾದ ರಾಘವೇಂದ್ರ ಆಚಾರ್ಯ ಮತ್ತು ಸದಸ್ಯರು, ಉಡುಪಿ ಜಿಲ್ಲಾ ಕಾರ್ಪೆಂಟರ್ಸ್ ಯೂನಿಯನ್ (ರಿ.) ಅಧ್ಯಕ್ಷ ಅಚ್ಚುತ ಆಚಾರ್ಯ, ಪ್ರಧಾನ ಸಂಚಾಲಕ ಗೋಕುಲ ಆಚಾರ್ಯ, ಉಪಾಧ್ಯಕ್ಷ ಶ್ರೀಪತಿ ಆಚಾರ್ಯ, ಹಾಗೂ ಸದಸ್ಯರು ಭಾಗವಹಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹ ಉತ್ಸಾಹದಿಂದ ಶ್ರಮದಾನದಲ್ಲಿ ಪಾಲ್ಗೊಂಡು ಸ್ವಚ್ಛತೆಗೆ ತಮ್ಮ ಕೊಡುಗೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles