ಉಡುಪಿ : ನಾಯಿ ಅಡ್ಡ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಉರುಳಿ ಬಿದ್ದು ತಾಯಿ ಮತ್ತು ಮಗು ಗಾಯಗೊಂಡ ಘಟನೆ ಕಾಪುನಲ್ಲಿ ನಡೆದಿದೆ. ಕಟಪಾಡಿಯ ಪ್ರತಿಮಾ ಮತ್ತು ಮಗಳು ಹೃತಿಕಾ ಗಾಯಗೊಂಡವರು.

ಕಾಪು ವಿದ್ಯಾನಿಕೇತನ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಮೂಳೂರಿನ ಎಸ್‌ಡಿಪಿಐ ಆ್ಯಂಬುಲೆನ್ಸ್ ಮೂಲಕ ಜಲಾಲುದ್ದೀನ್ ಯಾನೆ ಜಲ್ಲು, ಹಮೀದ್ ಉಚ್ಚಿಲ, ದಿವಾಕರ ಎರ್ಮಾಳು, ಝಮೀರ್ ಉಚ್ಚಿಲ ಮತ್ತು ಬಿಲಾಲ್ ಉಚ್ಚಿಲ ಸೇರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.



