Friday, July 25, 2025

spot_img

ಸೈನಿಕರ ಪುನರ್ ವಸತಿ ಕಲ್ಯಾಣ ಇಲಾಖೆ ಸ್ಥಾಪಿಸುವ ಬಗ್ಗೆ ಶಾಸಕರಿಗೆ ಮನವಿ…

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ಸ್ಥಾಪಿಸುವ ಬಗ್ಗೆ ಇಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರನ್ನು ಮಾಜಿ ಸೈನಿಕರು ಭೇಟಿಯಾದರು.

ಉಡುಪಿ ಜಿಲ್ಲೆಯಲ್ಲಿ ಸುಮಾರು 1,200 ಮಾಜಿ ಸೈನಿಕರು ವೀರ ನಾರಿಯರು ಹಾಗೂ ಅವರ ಪರಿವಾರದ ಸದಸ್ಯರನ್ನು ಸೇರಿ 4500 ಜನರು ನೆಲೆಸಿದ್ದು ಜಿಲ್ಲೆಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ಇಲ್ಲ. ಮಾಜಿ ಸೈನಿಕರು ವೀರ ನಾರಿಯರು ಹಾಗೂ ಅವರ ಕುಟುಂಬಸ್ಥರು ತಮ್ಮೆಲ್ಲ ಕಲ್ಯಾಣಕಾರಿ ಕೆಲಸಗಳಿಗಾಗಿ ದೂರದ ಮಂಗಳೂರಿಗೆ ಹೋಗಬೇಕಾಗಿದೆ. ನಾವೆಲ್ಲ ಮಾಜಿ ಸೈನಿಕರು ವೀರ ನಾರಿಯರು ಹಾಗೂ ಅವರ ಕುಟುಂಬಸ್ಥರು ಹೆಚ್ಚಿನವರು ಅರವತ್ತು ವರ್ಷಕ್ಕೂ ಮೇಲ್ಪಟ್ಟವರು. ಎಲ್ಲರೂ ವಯೋ ಸಹಜ ಕಾಯಿಲೆಯಿಂದ ಅಷ್ಟು ದೂರ ಪ್ರಯಾಣ ಮಾಡಿ ನಮಗೆ ಸಿಗುವ ಕಲ್ಯಾಣ ಕಾರ್ಯ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಸೈನಿಕರು ಶಾಸಕರ ಬಳಿಕ ತಮಗೆ ಆಗುತ್ತಿರುವ ಸಮಸ್ಯೆ ಹೇಳಿಕೊಂಡರು̤

ಉಡುಪಿಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಿ ಕೊಡಬೇಕು ಮತ್ತು ಮಾಜಿ ಸೈನಿಕರ ಕೋಟಾದಡಿ ಜಮೀನು ಮಂಜೂರಾತಿ ಅರ್ಜಿಯನ್ನು ಸಲ್ಲಿಸಿದ್ದು ಆದರೆ 95% ಮಾಜಿ ಸೈನಿಕರಿಗೆ ಜಾಗ ಇರುವವರೆಗೊ ಸಿಗಲಿಲ್ಲ. ಆದುದರಿಂದ ತಾವು ಇದರ ಬಗ್ಗೆ ಗಮನ ಹರಿಸಿ ತಾಲೂಕಿನಲ್ಲಿ ಅರ್ಜಿ ಕೊಟ್ಟಂತಹ ಮಾಜಿ ಸೈನಿಕರಿಗೆ ಜಾಗವನ್ನು ಮಂಜೂರು ಮಾಡಿ ಕೊಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಶಾಸಕ ಕಿರಣ್‌ ಕೊಡ್ಗಿ ಅವರು, ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ. ಕೆ. ಶೆಟ್ಟಿ, ಅನೇಕ ಮಾಜಿ ಸೈನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles