Wednesday, March 4, 2026

spot_img

ಸುಣ್ಣಾರಿಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ವನಮಹೋತ್ಸವ

ಕುಂದಾಪುರ : ಪರಿಸರ ಸಂರಕ್ಷಣೆ, ಅರಣ್ಯೀಕರಣ ಮತ್ತು ಗಿಡಗಳನ್ನು ನೆಡುವುದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಸುಣ್ಣಾರಿ ಕುಂದಾಪುರ ಇವರ ಆಶ್ರಯದಲ್ಲಿ ಎಂ ಎಂ ಹೆಗ್ಡೆ ಎಜುಕೇಶನಲ್ ಮತ್ತು ಚಾರೀಟೇಬಲ್ ಟ್ರಸ್ಟ್ (ರಿ) ಹಾಗೂ ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ -ಹುಣ್ಸೆಮಕ್ಕಿ ಇವರ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಎಂ ಹೆಗ್ಡೆ ಎಜುಕೇಶನಲ್ ಮತ್ತು ಚಾರೀಟೇಬಲ್ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಜುನಾಥ ಗಣಪತಿ ನಾಯಕ್, ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳು, ಕುಂದಾಪುರ ಇವರು ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅರಣ್ಯವಿಲ್ಲದೆ ಮಾನವ ಸಂಕುಲಕ್ಕೆ ಅಪಾಯ ತಪ್ಪಿದಲ್ಲ, ಪರಿಸರವಿಲ್ಲದೆ ಜೀವನವಿಲ್ಲ ಎಂದು ತಿಳಿಸಿದರು ಅಲ್ಲದೇ 1947ನೇ ಇಸವಿಯಿಂದ ವನಮಹೋತ್ಸವವನ್ನು ಉತ್ತಮವಾದ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ದೆಹಲಿಯಲ್ಲಿ ಅಂದು ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು. ಎಂದು ವಿವರಣೆ ನೀಡಿದರು. ತಾಯಿಯ ಹೆಸರಿನೊಂದಿಗೆ ಗಿಡ ನೆಡೋಣ ಎನ್ನುವ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ಗಿಡ ನೆಡುವ ಬಗ್ಗೆ ಪ್ರೋತ್ಸಾಹವನ್ನು ನೀಡಿದರು.

ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿಂದ ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ -ಹುಣ್ಸೆಮಕ್ಕಿ ಇದರ ಅಧ್ಯಕ್ಷರಾದ ದೀನಪಾಲ್ ಶೆಟ್ಟಿಯವರು, ಲಯನ್ಸ್ ಕ್ಲಬ್ ವತಿಯಿಂದ ಪ್ರತಿವರ್ಷ ಶಾಲೆ ಪಂಚಾಯತ್ ವಠಾರದಲ್ಲಿ ವನಮಹೋತ್ಸವ ಆಚರಣೆಯನ್ನು ನಡೆಸಿಕೊಂಡು ಬಂದಿರುವುದಾಗಿ ತಿಳಿಸಿದರು. ಲಯನ್ಸ್ ಜಿಲ್ಲಾ 317ಸಿ ಯ ಪ್ರಾಂತಿಯ ಅಧ್ಯಕ್ಷರಾದ ರಜತ್ ಕುಮಾರ್ ಹೆಗ್ಡೆಯವರು ಲಯನ್ಸ್ ಕ್ಲಬ್‌ನ ಮೂಲ ಗುರಿ ಉದ್ದೇಶಗಳನ್ನು ಸಾದರಪಡಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಲಯನ್ಸ್ ಕ್ಲಬ್‌ನ ಸದಸ್ಯರಾದ ಸುಬ್ಬಣ್ಣ ಶೆಟ್ಟಿಯವರು ಸಸಿಗಳನ್ನು ನೆಡುವುದರ ಜೊತೆಯಲ್ಲಿ ಅವುಗಳ ಪಾಲನೆ – ಪೋಷಣೆ ಮಾಡೋಣ ಎಂಬುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸೆಲ್ಪಿ ವಿದ್ ಪ್ಲಾö್ಯನ್ಟ್ ಪೋಟೋ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ಗಿಡಗಳನ್ನು ನೀಡಲಾಯಿತು. 6ನೇ ತರಗತಿಯಲ್ಲಿ ಸ್ತುತಿ ಎಸ್ ಶೆಟ್ಟಿ ಪ್ರಥಮ, ಮಹಮ್ಮದ್ ನಜೀಪ್ ದ್ವಿತೀಯ, 7ನೇ ತರಗತಿಯಲ್ಲಿ ಶ್ರೇಯಸ್ ಎಂ ನಾಯರ್ ಪ್ರಥಮ, ಬಾಲಾಜಿ ದ್ವಿತೀಯ, 8ನೇ ತರಗತಿಯಲ್ಲಿ ನಿಗಮ್ ಪ್ರಥಮ, ಧನ್ಯಶ್ರೀ ಕೆ ದ್ವಿತೀಯ, 9ನೇ ತರಗತಿಯಲ್ಲಿ ದಕ್ಷಾ ದೇವಾಡಿಗ ಪ್ರಥಮ, ಸಂಹಿತಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸರೋಜಿನಿ ಪಿ ಆಚಾರ್ಯರವರು ಸರ್ವರನ್ನು ಸ್ವಾಗತಿಸಿ, ಹಿಂದಿ ಶಿಕ್ಷಕಿ ಉಷಾಲತಾ ವಂದಿಸಿದರು. ಶಿಕ್ಷಕ ಸಂದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ಅಲ್ಲಿಂದ ನೇರವಾಗಿ ಕೊರ್ಗಿ ರವೀಂದ್ರ ಶೆಟ್ಟಿ ಯವರ ಗದ್ದೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆಯನ್ನು ತಿಳಿಸಿಕೊಡಲಾಯಿತು. ಕೊರ್ಗಿ ದಿನಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles