ಹೆಬ್ರಿ : ಜಿಲ್ಲೆಯಲ್ಲಿ ಇನ್ನೇನು ಒಂದು ಎರಡು ತಿಂಗಳುಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಕಳೆದ ಕೆಲವು ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದೆ, ಇಂತಹ ಜಿಲ್ಲೆಯ ಜೀವನದಿ ಅಥವಾ ಪ್ರಮುಖ ನೀರಿನ ಮೂಲ ಎನ್ನಬಹುದಾದ ಸೀತಾ ನದಿ ಕಲುಷಿತ ಮಾಡುವ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಸೀತಾ ನದಿಗೆ ಕೋಳಿ ತ್ಯಾಜ್ಯಗಳನ್ನು ನದಿಗೆ ಎಸೆದಿರುವ ಕೆಲವರು ಸಂಪೂರ್ಣ ನದಿ ನೀರನ್ನು ಕಲುಷಿತ ಮಾಡಲು ಹೊರಟಿದ್ದಾರೆ. ಈಗಾಗಾಲೆ ಹಕ್ಕಿನ ಜ್ವರದ ಭೀತಿಯಲ್ಲಿ ಇಡಿ ಇಲ್ಲೆ ಮುನ್ನೆಚ್ಚರಿಕೆಯಲ್ಲಿದೆ ಇಂತಹ ಸಂದರ್ಭದಲ್ಲಿ ನದಿ ನೀರಿಗೆ ಕೋಳಿ ತ್ಯಾಜ್ಯ ಎಸೆಯುವ ಮೂಲಕ ಸಾಂಕ್ರಾಮಿಕ ಬೀತಿ ಹೆಚ್ಚಿಸಿದ ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೆಬ್ರಿ ಭಾಗದ ಸಾಮಾಜಿಕ ಹೋರಾಟಗಾರ ಶ್ರೀಕಾಂತ ಕಚ್ಚೂರು ಆಗ್ರಹಿಸಿದ್ದಾರೆ.