Wednesday, March 18, 2026

spot_img

ಸಿಸಿ ಕ್ಯಾಮೆರಾ ವಿವಾದ: ವೃದ್ಧೆಯ ಮೇಲೆ ಹಲ್ಲೆ, ಜೀವ ಬೆದರಿಕೆ

ಉಡುಪಿ : ಸಿಸಿ ಕ್ಯಾಮೆರಾ ಅಳವಡಿಕೆ ವಿಚಾರವಾಗಿ ಉಂಟಾದ ನೆರೆಹೊರೆಯ ಕಲಹ ತೀವ್ರಗೊಂಡು ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ನಡೆದಿದೆ.

ರಾಧು ಪೂಜಾರ್ತಿ (65) ಅವರು ತಮ್ಮ ಮನೆಗೆ ಎದುರು ವಾಸವಾಗಿರುವ ಪ್ರೇಮ ಪೂಜಾರಿ ಅವರು ಮನೆಗೆ ಮುಖಮಾಡಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಅಸೌಕರ್ಯ ಉಂಟುಮಾಡುತ್ತಿದೆ ಎಂದು ಮಾ.9ರಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದರಿಂದ ಆಕ್ರೋಶಗೊಂಡ ಪ್ರೇಮ ಪೂಜಾರಿ, ಪ್ರವೀಣ್ ಟಿ ಪೂಜಾರಿ, ಯಶ್ವಿತಾ, ಪೂರ್ಣಿಮಾ, ಶಾಂತ, ಪ್ರಮೀಳಾ ಹಾಗೂ ತಮ್ಮಯ್ಯ ಅವರು ಮಾ.13ರಂದು ಬೆಳಿಗ್ಗೆ ಸುಮಾರು 8.25ಕ್ಕೆ ರಾಧು ಪೂಜಾರ್ತಿ ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಇದೇ ವೇಳೆ ಮನೆಯ ಸುತ್ತಮುತ್ತ ಸಂಚರಿಸಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದರೆಂದು ದೂರು ನೀಡಿದ್ದಾರೆ. ಗಾಯಗೊಂಡ ರಾಧು ಪೂಜಾರ್ತಿ ಅವರನ್ನು ಅವರ ಮಗ ಹಾಗೂ ಸಂಬಂಧಿಕರು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಸಂಬಂಧಿ ಹರೀಶ ಅವರ ಕುಮ್ಮಕ್ಕು ಇದ್ದುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles