Friday, February 6, 2026

spot_img

ಸಿದ್ದಾಪುರ ಏತ ನೀರಾವರಿ ಯೋಜನೆ: ಹೊಸಂಗಡಿ ಬಾಗೀಮನೆ ಪರಿಸರದಲ್ಲಿ ಸರ್ವೇ ಕಾರ್ಯ

ಉಡುಪಿ: ಹೊಸಂಗಡಿ ಗ್ರಾಮದ ಬಾಗೀಮನೆ ಪರಿಸರದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆಯ ಇಂಜಿನಿಯರುಗಳು ಸರ್ವೇ ಕಾರ್ಯವನ್ನು ನಡೆಸಿದರು. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಸ್ಥಳ ಪರಿಶೀಲನೆ ಕೈಗೊಳ್ಳಲಾಯಿತು.

ಸರ್ವೇ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಶೆಟ್ಟಿ ಕಾರೂರು ಹಾಗೂ ಆನಂದ ಕಾರೂರು ಭೇಟಿ ನೀಡಿ ಇಂಜಿನಿಯರ್‌ಗಳಿಗೆ ಅಗತ್ಯ ಸಹಕಾರ ನೀಡಿದರು.

ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಯಾದಲ್ಲಿ ಹೊಸಂಗಡಿ ಗ್ರಾಮದ ಬಾಗೀಮನೆ ಪರಿಸರದಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು, ಮುಂದಿನ ಹಂತಗಳಲ್ಲಿ ಯೋಜನೆಯ ಪ್ರಗತಿಗೆ ಅನುಗುಣವಾಗಿ ಇನ್ನಷ್ಟು ಕಾರ್ಯಗಳು ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles